ಕೇರಳ-ಆಂದ್ರ-ತಮಿಳುನಾಡಿಗೂ ಅನುದಾನ- “ಕರ್ನಾಟಕಕ್ಕೆ ನೋ ಅನುದಾನ”..!
ನವದೆಹಲಿ: ಕೇಂದ್ರ ಸರಕಾರವೂ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ 14 ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡಿದ್ದು, ಕೇರಳ, ತಮಿಳುನಾಡು, ಆಂದ್ರಪ್ರದೇಶಕ್ಕೆ ಅನುದಾನ ನೀಡಿದ್ದು, ಕರ್ನಾಟಕಕ್ಕೆ ಮಾತ್ರ ಒಂದು ರೂಪಾಯಿಯನ್ನ ಹಂಚಿಕೆ ಮಾಡಿಲ್ಲ.
ಸೆಪ್ಟಂಬರ್ 10ರಂದು ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿರುವ ಕೇಂದ್ರ ಸರಕಾರ, ಆಂದ್ರಪ್ರದೇಶಕ್ಕೆ 49141ಲಕ್ಷ ರೂ, ಕೇರಳಕ್ಕೆ 127691.66 ಲಕ್ಷ ರೂ ಗಳನ್ನ ಬಿಡುಗಡೆ ಮಾಡಿದೆಯಾದರೂ, ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದ್ದರೂ ಒಂದೇ ಒಂದು ರೂಪಾಯಿಯನ್ನ ನೀಡದೇ ಇರುವುದು ಸೋಜಿಗ ಮೂಡಿಸಿದೆ.
ಈ ಹಿಂದೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ಪ್ರಸಕ್ತ ವರ್ಷದ ಜುಲೈ ಅಂತ್ಯಕ್ಕೆ ಕೇಂದ್ರ ಸರಕಾರ ರಾಜ್ಯಕ್ಕೆ 1530 ಕೋಟಿ ರೂಪಾಯಿಗಳನ್ನ ಹಂಚಿಕೆ ಮಾಡಿತ್ತು.
ರಾಜ್ಯದಲ್ಲಿಯೂ ನೆರೆ, ಪ್ರವಾಹ ಬಂದು ಸಾಕಷ್ಟು ತೊಂದರೆಗಳಿದ್ದರೂ, ಕೇಂದ್ರ ಸರಕಾರ ಹಣವನ್ನ ನೀಡದೇ ಇರುವುದು ಮುಂದಿನ ದಿನಗಳಲ್ಲಿ ತೊಂದರೆಯಾಗುವ ಲಕ್ಷಣಗಳಿವೆ.