ರಾತ್ರಿ ಕರ್ಪ್ಯೂ ಅಂತ್ಯ-ಜಿಮ್ ಓಪನ್‌ಗೆ ಅವಕಾಶ- ಶಾಲೆ-ಕಾಲೇಜು ಆಗಸ್ಟ್ 31ರ ವರೆಗೆ ಕ್ಲೋಸ್: ಕೇಂದ್ರದ ಹೊಸ ಆದೇಶ
ನವದೆಹಲಿ: ಆಗಸ್ಟ್ ಒಂದರ ಮೊದಲೇ ಕೇಂದ್ರ ಹಲವು ರೂಪದ ಆದೇಶವನ್ನ ಹೊರ ಹಾಕಿದ್ದು, ಆಗಸ್ಟ್ 31 ರ ವರೆಗೆ ಯಾವುದೇ ಕಾರಣಕ್ಕೂ ಶಾಲೆ-ಕಾಲೇಜುಗಳು ಆರಂಭವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಲಾಕ್‌ಡೌನ್ ಆರಂಭವಾದ ಶಾಲಾ-ಕಾಲೇಜುಗಳ ಸ್ಥಿತಿಯ ಬಗ್ಗೆ ಸ್ಪಷ್ಟವಾದ ಚಿತ್ರಣ ನೀಡಿದೆ. ಇನ್ನೂ ಆಗಸ್ಟ್ 5ರ ನಂತರ ಜಿಮ್ ಆರಂಭಿಸಲು ಅವಕಾಶ ನೀಡಲಾಗಿದೆ. ಪ್ರಮುಖವಾಗಿ ರಾತ್ರಿ ಒಂಬತ್ತರಿಂದ ಬೆಳಗಿನ ಐದರವರೆಗೆ ಹಾಕಲಾಗಿದ್ದ ಕರ್ಪ್ಯೂವನ್ನ ಹಿಂದೆ ಪಡೆಯಲಾಗಿದೆ.
ಕೇಂದ್ರ ಸರಕಾರದ ಆದೇಶದ ಪ್ರತಿ ಕರ್ನಾಟಕ ವಾಯ್ಸ್‌ಗೆ ಲಭಿಸಿದ್ದು, ಅದನ್ನ ನೋಡಬಹುದು.