ಸಿಡಿಗೂ ಬಾಲ್ಕಿಗೂ ನಂಟು- ಎತ್ತಾಂಕ್ಕೊಂಡು ಹೋಗಿದ್ಯಾರು: ಸಿಸಿಟಿವಿ ಸಾಕ್ಷ್ಯ…

ಬೀದರ: ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ರಾಜೀನಾಮೆಗೆ ಕಾರಣವಾದ ಅಶ್ಲೀಲ ಸಿಡಿ ಪ್ರಕರಣ ಬೆಂಗಳೂರಿನಿಂದ ಆರಂಭಗೊಂಡು ಬೀದರಗೆ ತಲುಪಿದೆ. ಗಡಿ ಜಿಲ್ಲೆಯ ಬಾಲ್ಕಿಯಿಂದ ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ಖಚಿತ ಮಾಹಿತಿಯಿದ್ದರೂ, ಓರ್ವನ ಅಪಹರಣ ಪ್ರಕರಣ ಕೂಡಾ ದಾಖಲಾಗಿದೆ.
ಬೀದರ ಜಿಲ್ಲೆಯ ಬಾಲ್ಕಿ ಪಟ್ಟಣದ ಆಕಾಶ ತಲವಾಡೆ ಮತ್ತು ಅಭಿಷೇಕ ಜಿಂದೆ ಎಂಬುವವರನ್ನ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದ್ದರೂ, ಅಭಿಷೇಕ ಜಿಂದೆಯ ಅಪಹರಣವಾಗಿದೆ ಎಂದು ಬಾಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ತೀವ್ರ ಥರದಿಂದ ನಡೆಸಿದ್ದರಿಂದ, ಪ್ರಮುಖ ಕೊಂಡಿಗಳು ಜೋಡಿಕೊಳ್ಳುತ್ತ ಹೊರಟಿವೆ ಎನ್ನಲಾಗಿದೆ.
ಸಿಡಿಯ ಹಿಂದೆ ಸಿಕ್ಕವರ ಪಾತ್ರಗಳೇನು ಎಂಬುದು ಹೊರಗೆ ಬರಬೇಕಿದೆ.

