ಧಾರವಾಡದ ಗೋವನಕೊಪ್ಪ ರಸ್ತೆಯ ಮಿಲನ್ ಹಾಲ್ ಹತ್ತಿರ ಗಾಂಜಾ ಮಾರುತ್ತಿದ್ದ “3 ಯುವಕರು” ಅರೆಸ್ಟ್…
ಧಾರವಾಡ: ಗೋವನಕೊಪ್ಪ ರಸ್ತೆಯ ಮಿಲನ ಹಾಲ್ ಹತ್ತಿರ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನ ಬಂಧಿಸುವಲ್ಲಿ ಸಿಸಿಬಿ ತಂಡ ಯಶಸ್ವಿಯಾಗಿದ್ದು, ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಅಪರಧ ವಿಭಾಗದ ಪಿಎಸ್ಐ ಮಂಜುನಾಥ ಟಿ.ಎಂ ತಂಡವೂ ಬಂಧಿತರಿಂದ 1940 ಗ್ರಾಂ ನೀಷೇಧಿತ ಮಾದಕ ವಸ್ತುವನ್ನ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 1,90,300 ಎಂದು ಅಂದಾಜಿಸಲಾಗಿದೆ.
ನಿಜಾಮುದ್ಧೀನ ಕಾಲನಿಯ 21ವಯಸ್ಸಿನ ಮಹಮ್ಮದಸಮೀರ ಮುಕ್ತಿಯಾರಅಹಮ್ಮದ ಅತ್ತಾರ, ಜನ್ನತನಗರದ 26ವಯಸ್ಸಿನ ಸಯ್ಯದ ಬಾಬುಸಾಬ ಅತ್ತಾರ ಹಾಗೂ ಮಣಕಿಲ್ಲಾದ 24ವಯಸ್ಸಿನ ಜಾಕೀರಹುಸೇನ ಇಮ್ಮಿಯಾಜ ತಡಕಲ್ ಎಂಬುವವರನ್ನ ಬಂಧಿಸಲಾಗಿದೆ.

ಪಿಎಸ್ಐ ಆರ್.ಎಚ್.ನದಾಫ ಪ್ರಕರಣ ದಾಖಲಿಸಿಕೊಂಡಿದ್ದು, ಸಿಎಚ್ ಸಿ-1587 ಎಸ್ ಬಿ ಪಾಟೀಲ, ಸಿಹೆಚ್ ಸಿ-1915 ಎಂ. ಡಿ ಬಡಿಗೇರ, ಸಿಪಿಸಿ-2933 ಎಸ್ ಎನ್ ತಲ್ಲೂರ, ಸಿಪಿಸಿ-3000 ಎಮ್ ವೈ ಮಾದರ ಕಾರ್ಯಾಚರಣೆಯಲ್ಲಿದ್ದರು.
