“ಕಿಲಾಡಿ ಜೋಡಿ” ಅಂದರ್ ಮಾಡಿದ ಸಿಸಿಬಿ ಪೊಲೀಸ್

ಧಾರವಾಡ: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ಹುಬ್ಬಳ್ಳಿ-ಧಾರವಾಡದಲ್ಲೂ ಕಳ್ಳತನ ಮಾಡುತ್ತಿದ್ದ ಚಾಲಾಕಿ ಸಹೋದರರನ್ನ ಹಿಡಿಯುವಲ್ಲಿ ಹುಬ್ಬಳ್ಳಿಯ ಸಿಸಿಬಿ ಹಾಗೂ ಸಿಸಿಆರ್ ಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಧಾರವಾಡದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ತಂದಿದ್ದ ಬಂಗಾರ,ಹಾಗೂ ಬೈಕ್ ಗಳ ಸಮೇತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೂಡಾ ಈ ಸಹೋದರರು ಕಳ್ಳತನ ಮಾಡಿದ್ದರು ಎಂದು ಗೊತ್ತಾಗಿದೆ. ಬಂದಿತರಿಂದ ಒಟ್ಟು 10 ಗ್ರಾಂ ಬಂಗಾರ, 3ಬೈಕ್, ಹಾಗೂ 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊದಲು ಉಣಕಲ್ ನ ಸಿದ್ದರಾಮೇಶ್ವರ ನಗರದ ನಿವಾಸಿಯಾಗಿದ್ದ ಹಸನಸಾಬ್ ಹಾಗೂ ಆಶಿಪ್ ಸಾಬ್ ಇವರಿಬ್ಬರು ಸಹೋದರರಾಗಿದ್ದು, ಕಳ್ಳತನ ಮಾಡುವುದನ್ನೇ ಇಬ್ಬರು ವೃತ್ತಿಯನ್ನಾಗಿಸಿಕೊಂಡಿದ್ದಾರೆ.
ಇವರ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ಪೆಕ್ಟರ್ ಅಲ್ತಾಫ್ ಮುಲ್ಲಾ ಹಾಗೂ ಸಿಸಿ ಆರ್ ಬಿ ಇನ್ಸ್ಪೆಕ್ಟರ್ ಭರತ ರೆಡ್ಡಿ ಸಿಬ್ಬಂದಿಗಳಾದ ಶಿವರಾಜ ಸೋಳಂಕಿ, ಚಿಕ್ಕಮಠ, ಗುಂಜಾಳ, ಚೆನ್ನಪ್ಪನವರ್, ಇಚ್ಛಂಗಿ, ಗಾಣದಾಳ, ಅನಿಲ ಉದ್ದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.