ಕರ್ನಾಟಕದಲ್ಲಿ ಕ್ಯಾಸೀನೋ ಕಿತಾಪತಿ: ಸಚಿವರ ನಿರಾಕರಣೆ
ಬೆಂಗಳೂರು: ಕರ್ನಾಟಕದಲ್ಲಿಯೂ ಗೋವಾ ಮತ್ತು ಮಹಾರಾಷ್ಟ್ರದ ಹಾಗೇ ಕ್ಯಾಸೀನೋ ಆರಂಭ ಮಾಡಲಾಗುತ್ತಿದೆ ಎಂಬ ೂಹಾಪೋಹಗಳಿಗೆ ಸಚಿವ ಸಿ.ಟಿ.ರವಿ ತೆರೆ ಎಳೆದಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಅಭಿವೃದ್ಧಿ ಹಿತದೃಷ್ಠಿಯಿಂದ ಕ್ಯಾಸೀನೋ ಆರಂಭಿಸಲು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಸ್ವತಃ ಸಚಿವರೇ ಇದನ್ನ ನಿರಾಕರಸಿದ್ದರಿಂದ ಬಹುದೊಡ್ಡ ಫೀಡೆ ಬರುವ ಲಕ್ಷಣ ಇಲ್ಲದಂತಾಗಿದೆ.
ಈಗಾಗಲೇ ಸಾವಿರಾರೂ ಕುಟುಂಬಗಳಿಗೆ ತಣ್ಣೀರು ಹಾಕಿರುವ ಕ್ಯಾಸೀನೋಗಳು ನಮ್ಮಲ್ಲೇ ಆರಂಭಗೊಂಡರೇ ಮತ್ತಷ್ಟು ಕುಟುಂಬಗಳು ಬೀದಿಗೆ ಬರುವುದಂತೂ ಸತ್ಯ.