ಧಾರವಾಡದಲ್ಲಿ ಹೊತ್ತಿ ಉರಿದ ಕಾರು: ಕಾರಲ್ಲಿದ್ದವರಿಬ್ಬರು ಹೇಗೆ ಪಾರಾದ್ರೂ ಗೊತ್ತಾ- ವೀಡಿಯೋ ಸಮೇತ ಎಕ್ಸಕ್ಲೂಸಿವ್…

ಧಾರವಾಡ: ನಗರದಲ್ಲಿ ಮಧ್ಯಾಹ್ನವೇ ಕಾರೊಂದು ಹೊತ್ತಿ ಉರಿದ ಘಟನೆಯೊಂದು ನಡೆದಿದ್ದು, ಕಾರಲ್ಲಿದ್ದವರು ಜಾಣಾಕ್ಷತನದಿಂದ ಹೊರಗೆ ಬಂದು ಪ್ರಾಣವನ್ನ ಉಳಿಸಿಕೊಂಡಿದ್ದಾರೆ.
ಧಾರವಾಡದ ರೇಲ್ವೆ ನಿಲ್ದಾಣದಿಂದ ಉದಯ ಹಾಸ್ಟೇಲ್ ಮಾರ್ಗಕ್ಕೆ ಹೋಗುವ ರಸ್ತೆಯಲ್ಲಿ ಘಟನೆ ನಡೆದಿದ್ದು, ತಾಂತ್ರಿಕ ದೋಷದಿಂದ ಕಾರಿಗೆ ಬೆಂಕಿ ತಗುಲಿ, ಧಗಧಗ ಹೊತ್ತಿ ಉರಿದಿದೆ.
ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..
ಗಾಬರಿ ಹುಟ್ಟಿಸುವಂತೆ ಬೆಂಕಿ ಹತ್ತಿದಾಗಲೇ ಕಾರನ್ನ ಬಿಟ್ಟು ಇಬ್ಬರು ಓಡಿ ಬಂದಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ತಡವಾಗಿ ಬಂದ ಪರಿಣಾಮ, ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.