ಧಾರವಾಡ ಜಿಲ್ಲಾ ಪಂಚಾಯತಿ ಬಳಿ ಕಾರು ಮೇಲೆ ಮರ…!

ಧಾರವಾಡ: ಜಿಲ್ಲಾಧಿಕಾರಿಗಳ ಕಚೇರಿಗೆ ಕಾರ್ಯನಿಮಿತ್ತ ಬಂದಿದ್ದ ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ಕಾರು ನಿಲ್ಲಿಸಿ ಕಚೇರಿ ಹೋದಾಗ, ಮರವೊಂದು ಕಾರಿನ ಮೇಲೆ ಬಿದ್ದು ಕಾರು ಜಖಂಗೊಂಡ ಘಟನೆ ನಡೆದಿದೆ.
ಹುಬ್ಬಳ್ಳಿಯ ಪದ್ಮರಾಜನಗರದ ನಿವಾಸಿಯಾದ ಎಸ್.ಅಭಿಜಿತ್ ಎನ್ನುವವರಿಗೆ ಸೇರಿದ ಕಾರು ಹುಂಡೈ ಕಾರಿನ ಮೇಲೆ ಮರದ ದೊಡ್ಡದೊಂದು ಟೊಂಗೆ ಬಿದ್ದಿದ್ದು, ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಕಾರಿನ ಮುಂದಿನ ಗ್ಲಾಸು ಒಡೆದಿದೆ.
ಕಾರು ನಿಲ್ಲಿಸಿ ಹೋಗಿ ಮರಳಿ ಬಂದ ಅಭಿಜಿತ್ ಅವರಿಗೆ ಘಟನೆಯನ್ನ ನೋಡಿ ಆತಂಕಕ್ಕೆ ಒಳಗಾಗಿದ್ದರು. ತಕ್ಷಣವೇ ಸಂಚಾರಿ ಠಾಣೆಯ ಪೊಲೀಸರಿಗೆ ಮಾಹಿತಿಯನ್ನ ರವಾನೆ ಮಾಡಿದ್ದು, ಮರವನ್ನ ತೆಗೆಸಲು ಅರಣ್ಯ ಇಲಾಖೆಯವರನ್ನ ಕರೆಸಿಕೊಂಡು ತೆಗೆಸುವ ಪ್ರಯತ್ನ ಮಾಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯ ಅಕ್ಕಪಕ್ಕದಲ್ಲಿ ಕೆಲವು ಗೀಳಾದ ಮರಗಳಿದ್ದು, ಅವುಗಳನ್ನ ತೆಗೆಸದೇ ಇರುವುದರಿಂದ ಇಂತಹ ಅವಘಡ ಸಂಭವಿಸುತ್ತಿವೆ ಅಂತಾರೆ ವಾಹನ ಮಾಲೀಕರು.