Exclusive-ಮೂರು ಜನರನ್ನ ಬದುಕಿಸಿದ ಮುತ್ತು: ಧಾರವಾಡದ ಹೀರೋ..!
ಧಾರವಾಡ: ಆತ ರಸ್ತೆಯಲ್ಲಿ ಹೋಗುತ್ತಿದ್ದ. ಪಕ್ಕದಲ್ಲಿಯೇ ಚೀರಾಟ ಕೇಳಿಸತೊಡಗಿತು. ಬೈಕ್ ನಿಲ್ಲಿಸಿ ನೋಡಿದ್ರೇ ಮುಳ್ಳುಕಂಟಿಗಳ ನಡುವೆ ಕಾರೊಂದು ಪಲ್ಟಿಯಾಗಿ ಒಳಗಿದ್ದವರು ಬದುಕಿಗೆ ಬೇಡಿಕೊಳ್ಳುತ್ತಿದ್ದರು. ತಡಮಾಡದೇ ಕಾರ್ಯ ಮಗ್ನನಾಗಿದ್ದು…
ಗೋಕಾಕನಿಂದ ಧಾರವಾಡಕ್ಕೆ ಆಸ್ಪತ್ರೆಗೆ ಬಂದು ಮರಳಿ ಹೋಗುತ್ತಿದ್ದಾಗ ಮಾರುತಿ ಸ್ವಿಪ್ಟ ಕಾರು, ಆಯತಪ್ಪಿ ಕಂದಕಕ್ಕೆ ಬಿದ್ದಿತ್ತು. ಅದರಲ್ಲಿದ್ದ ಸಂತೋಷ ಅತ್ತಿಮರದ, ಮೇಘ ಮತ್ತು ನಾಲ್ಕು ವರ್ಷದ ಮಗುವಿದ್ದರು. ಚೀರಾಟವನ್ನ ನೋಡದೇ ಅದೇ ಮುಳ್ಳು ಗಂಟಿಯಲ್ಲಿ ಇಳಿದು, ಈ ಮೂವರನ್ನ ತೆಗೆದಿದ್ದು ಹಾರೋಬೆಳವಡಿ ಗ್ರಾಮ ಪಂಚಾಯತಿಯಲ್ಲಿ ಡಾಟಾ ಎಂಟ್ರಿ ಕಾರ್ಯನಿರ್ವಹಿಸುವ ಮುತ್ತು ಕೊಟಬಾಗಿ.
ಮೂಲತಃ ಇನಾಂಹೊಂಗಲದ ಮುತ್ತು ಕೊಟಬಾಗಿ, ಕಾರಿನಲ್ಲಿ ಸಿಕ್ಕಿಕೊಂಡಿದ್ದ ಕುಟುಂಬವನ್ನ ಬದುಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾರು ಬಿದ್ದ ಸ್ಥಳಕ್ಕೆ ಹೋಗಿ, ಮತ್ತೆ ರಸ್ತೆಗೆ ಓಡಿ ಬಂದು ಮತ್ತೊಂದಿಷ್ಟು ಜನರನ್ನ ಕೆಳಗೆ ಕರೆದುಕೊಂಡು ಹೋಗಿ ಕಾರನ್ನ ಎತ್ತಿ, ಮೂವರನ್ನೂ ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮರೇವಾಡದ ಬಳಿ ಕಾರು ಬಿದ್ದಿದ್ದು ಮತ್ತೂ ಕಾರಿನಲ್ಲಿದ್ದವರನ್ನ ಹೊರಗೆ ತೆಗೆದಿರುವ ವೀಡಿಯೋ ವೈರಲ್ ಆಗಿದೆ. ಆದರೆ, ಅದರೊಳಗೆ ಇದ್ದವರನ್ನ ಜೀವಸಮೇತ ಹೊರಗೆ ತೆಗೆಯುವಲ್ಲಿ ಕಾರಣಿಭೂತರಾದವರನ್ನ ಮರೆಯಲಾಗಿದೆ. ಅದನ್ನ ತಿಳಿಸುವ ಪ್ರಯತ್ನವನ್ನ ಕರ್ನಾಟಕವಾಯ್ಸ್ ಮಾಡಿದೆ.
ಮೂವರನ್ನ ಬದುಕಿಸಿದ ನಿಜವಾದ ಹೀರೊ ಮುತ್ತು.. ಇಂಥವರಿಗೊಂದು ಶುಭಾಶಯ ತಿಳಿಸಿ.. ಗುಡ್ ಎನ್ನಿ.. ಮತ್ತಷ್ಟು ಜೀವನ ಉತ್ಸಾಹ ಮೂಡತ್ತೆ..
ಆತನ ನಂಬರ- 9902674370.. ಕೊನೆಪಕ್ಷ ವಾಟ್ಸಾಫ್ ಮಾಡಿ ಪ್ರೋತ್ಸಾಹಿಸಿ.