ರಣರೋಚಕ… ಆಕಾಶದಲ್ಲಿ ಹಾರಿದ ಮರ್ಸಿಡೀಸ್ ಕಾರು… CCTV ವೀಡಿಯೋ ವೈರಲ್…
ವಿಶ್ವದಾದ್ಯಂತ ವೈರಲ್ ಆಗಿರುವ ವೀಡಿಯೋ
ಯಾವುದೇ ಸಿನೇಮಾದಲ್ಲಿ ಕಾಣ ಸಿಗದ ನೈಜ ಚಿತ್ರಣ
ಭಯಾನಕ ಮತ್ತು ಅಚ್ಚರಿ ಮೂಡಿಸುವ ರಸ್ತೆ ಅಪಘಾತವೊಂದು ನಡೆದಿದ್ದು, ವೇಗವಾಗಿ ಬಂದ ಮರ್ಸಿಡಿಸ್ ಕಾರು ನಿಯಂತ್ರಣ ತಪ್ಪಿ ಬಸ್ ಹಾಗೂ ಎರಡು ಕಾರುಗಳ ಮೇಲೆ ವಿಮಾನದಂತೆ ಆಕಾಶಕ್ಕೆ ಹಾರಿ ನಂತರ ಸಮೀಪದ ಪೆಟ್ರೋಲ್ ಬಂಕ್ ಬಳಿ ಅಪ್ಪಳಿಸಿದ ಘಟನೆ ರೊಮೇನಿಯಾದ ಓರ್ಡಿಯಾ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಡಿಸೆಂಬರ್ 3 ರಂದು ನಡೆದ ಈ ವಿಸ್ಮಯಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೊ ವಿಶ್ವದಾದ್ಯಂತ ವೈರಲ್ ಆಗಿದೆ ಎಂದು ‘ಯೂರೋ ವೀಕ್ಲಿ ನ್ಯೂಸ್’ ವರದಿ ಮಾಡಿದೆ.
ಇಲ್ಲಿದೆ ನೋಡಿ… ವೀಡಿಯೋದ ಲಿಂಕ್…
https://www.instagram.com/reel/DR9EI7Yklm0/?igsh=eWhlOXdpaXE2eWht
ವೈರಲ್ ಆಗಿರುವ ದೃಶ್ಯದಲ್ಲಿ, ಅತಿ ವೇಗದಲ್ಲಿ ಬಂದ ಮರ್ಸಿಡಿಸ್ ಕಾರು ಟ್ರಾಫಿಕ್ ವೃತ್ತದಲ್ಲಿ ವಿರುದ್ಧ ದಿಕ್ಕಿನಿಂದ ಪ್ರವೇಶಿಸಿ, ರಸ್ತೆಯ ತಡೆಗೋಡೆಗೆ (Kerb) ಅಪ್ಪಳಿಸಿದೆ. ಇದರ ಪರಿಣಾಮವಾಗಿ ಕಾರು ಬಹುತೇಕ ಕೆಲವು ಅಡಿಗಳಷ್ಟು ಆಕಾಶಕ್ಕೆ ಚಿಮ್ಮಿದೆ.
ಆಗಸದಲ್ಲಿ ಹಾರಿದ ವಾಹನವು ಎದುರಿನಿಂದ ಬರುತ್ತಿದ್ದ ಕಾರುಗಳ ಮೇಲೆ ಹಾರಿ, ಕೊನೆಗೆ ಪೆಟ್ರೋಲ್ ಬಂಕ್‌ನಿಂದ ಕೆಲವೇ ಮೀಟರ್ ದೂರದಲ್ಲಿರುವ ಲೋಹದ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಪೆಟ್ರೋಲ್ ಬಂಕ್ ಸ್ಫೋಟಗೊಳ್ಳುವಂತಹ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಚಾಲಕನಿಗೆ ಮಧುಮೇಹದ ತೀವ್ರ ಸಂಚಲನವೇ ಕಾರಣ
ಸುದ್ದಿ ವರದಿಗಳ ಪ್ರಕಾರ, ಕಾರು ಚಲಾಯಿಸುತ್ತಿದ್ದ 55 ವರ್ಷದ ಚಾಲಕನಿಗೆ ಮಧುಮೇಹದ (Diabetic Episode) ತೀವ್ರ ಸಂಚಲನದಿಂದಾಗಿ ಚಾಲನೆ ವೇಳೆ ಪ್ರಜ್ಞೆ ತಪ್ಪಿರುವುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ. ನಿಯಂತ್ರಣ ಕಳೆದುಕೊಂಡ ಆತ ಅತಿ ವೇಗದಲ್ಲಿ ಜಂಕ್ಷನ್‌ಗೆ ನುಗ್ಗಿದ ಕಾರಣ ಮೇಲಕ್ಕೆ ಆಗಸದಲ್ಲಿ ಚಿಮ್ಮಿ ಮುಂದಕ್ಕೆ ಜಿಗಿದಿದೆ.
