ಹುಬ್ಬಳ್ಳಿ- ಅಪಘಾತಕ್ಕೆ ಹದಿನೈದು ಅಡಿ ದೂರ ಹಾರಿದ ಸವಾರರು: ಇಬ್ಬರ ಸ್ಥಿತಿ ಚಿಂತಾಜನಕ
ಹುಬ್ಬಳ್ಳಿ: ನವನಗರದ ಬಳಿ ನಡೆದಿರುವ ರಸ್ತೆ ಅಪಘಾತದಲ್ಲಿ ಇಬ್ಬರು ಜುಪಿಟರ್ ಸವಾರರು ಹದಿನೈದು ಅಡಿಯಷ್ಟು ದೂರ ಹೋಗಿ ಬಿದ್ದಿರುವ ಘಟನೆ ನಡೆದಿದೆ.
ಜೆಲಾನಿ ಹಂಚಿನಮನಿ ಅವರಿಗೆ ಸೇರಿದ ಜುಪಿಟರ್ ದ್ವಿಚಕ್ರ ವಾಹನಕ್ಕೆ ನಾಗೇಂದ್ರ ಬಾಕಳೆ ಅವರಿಗೆ ಸೇರಿದ ಕಾರು ಡಿಕ್ಕಿ ಹೊಡೆದಿದೆ.
ಜುಪಿಟರ್‌ನಲ್ಲಿದ್ದ ಇಬ್ಬರಿಗೂ ತೀವ್ರ ಥರವಾದ ಗಾಯವಾಗಿದ್ದು, ಧಾರವಾಡ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.