ಪ್ರೂಟ್ ಇರ್ಫಾನ್ ಹತ್ಯೆಗೆ ಬಳಕೆಯಾಗಿದ್ದು ಬುಲೆಟ್-ಡಿಯೋ ಅಷ್ಟೇ ಅಲ್ಲ, ಕಾರು ಬಳಕೆಯಾಗಿದೆ..!
ಹುಬ್ಬಳ್ಳಿ: ಮಗನ ವಲೀಮಾ ಮುಗಿಸಿ ಹೊರಗೆ ನಿಂತಿದ್ದ ಇರ್ಫಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಫಾನ್ ಮೇಲೆ ಗುಂಡಿನ ದಾಳಿ ನಡೆಯುವಾಗ ಬುಲೆಟ್ ಮತ್ತು ಡಿಯೋದಲ್ಲಿ ಪರಾರಿಯಾದ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿದ್ದವಾದರೂ, ಅದೇ ಸಮಯದಲ್ಲಿ ಕಾರು ಕೂಡಾ ಬಳಕೆಯಾಗಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಸಿಸಿಟಿವಿ ಪ್ರಕಾರ ಬುಲೆಟ್ ನಲ್ಲಿ ಇಬ್ಬರು ಕುಳಿತು ಬರುತ್ತಾರೆ. ಪಕ್ಕದಲ್ಲಿ ನಡೆದುಕೊಂಡು ಮತ್ತೋಬ್ಬ ಬರುತ್ತಾನೆ, ಹಾಗೇ ಬಂದವ ಬುಲೆಟ್ ನಲ್ಲಿ ಹತ್ತಿ ಪರಾರಿಯಾಗುತ್ತಾನೆ. ಆದರೆ, ಹಿಂಬದಿಯಿಂದ ಬಂದು ತೆಲೆಗೆ ಗುಂಡು ಹಾರಿಸಿದ ದುಷ್ಕರ್ಮಿ ಮತ್ತೊಂದು ಡಿಯೋದಲ್ಲಿ ಪರಾರಿಯಾಗುತ್ತಾನೆ ಎಂಬುದಿತ್ತು.
ತನಿಖೆಗೆ ತೀವ್ರತೆ ನೀಡಿರುವುದರಿಂದ ಪೊಲೀಸರಿಗೆ ಹೊಸ ಮಾಹಿತಿಗಳು ಲಭ್ಯವಾಗುತ್ತಿವೆ. ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಕೊಲೆ ನಡೆದ ನಂತರ ಬುಲೆಟ್ ಮತ್ತು ಡಿಯೋದಲ್ಲಿ ಪರಾರಿಯಾದವರು ಮತ್ತೊಂದು ಕಾರನ್ನ ಬಳಕೆ ಮಾಡಿದ್ದಾರೆಂಬುದು. ನಗರದ ಇನ್ನುಳಿದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಗಳನ್ನೂ ಪೊಲೀಸರು ಕಲೆ ಹಾಕುತ್ತಿದ್ದು ಮಹತ್ವದ ಸಾಕ್ಷಿಗಳು ಲಭಿಸಿವೆ ಎನ್ನಲಾಗಿದೆ.