ಅಣ್ಣಿಗೇರಿ ಬಳಿ ನಡುರಸ್ತೆಯಲ್ಲೇ “ಕಾರು ಪಲ್ಟಿ”- ಹಲವರು ಪ್ರಾಣಾಪಾಯದಿಂದ ಪಾರು…

ಅಣ್ಣಿಗೇರಿ: ಆಂದ್ರಪ್ರದೇಶ ಮೂಲದ ಕಾರೊಂದು ವೇಗವಾಗಿ ಬಂದು ನಡು ರಸ್ತೆಯಲ್ಲಿ ಪಲ್ಡಿಯಾದ ಘಟನೆ ಪಟ್ಟಣದ ಬಂಗಾರಪ್ಪ ಪ್ಲಾಟ್ ಬಳಿ ಸಂಭವಿಸಿದೆ.
ಘಟನೆಯಲ್ಲಿ ಯಾರಿಗೂ ಪ್ರಾಣ ಹಾನಿ ಸಂಭವಿಸಿಲ್ಲವಾದರೂ, ಸಣ್ಷಪುಟ್ಟ ಗಾಯಗಳಾಗಿವೆ. ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಪೆಟ್ರೋಲಿಂಗ್ ವಾಹನ ಸ್ಥಳಕ್ಕೆ ದೌಡಾಯಿಸಿ, ರಸ್ತೆಯಲ್ಲಿ ಬಿದ್ದಿದ್ದ ವಾಹನವನ್ನ ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ.
ಕಾರಿನಲ್ಲಿದ್ದವರು ಎಲ್ಲಿಂದ ಎಲ್ಲಿಗೆ ಹೊರಟಿದ್ದರು ಮತ್ತು ಕಾರಿನಲ್ಲಿ ಮಹಿಳೆಯರು ಸೇರಿ ಎಷ್ಟು ಜನರಿದ್ದರು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.