ಪವರ್ ಟವಿ ಕ್ಯಾಮರಾಮನ್ ಇನ್ನಿಲ್ಲ: ಪ್ರಿಯ ಸುನೀಲ ಮತ್ತೆ ಹುಟ್ಟಿ ಬಾ..
ಹುಬ್ಬಳ್ಳಿ: ಕಳೆದ ಮೂರು ದಿನಗಳ ಹಿಂದೆ ಹುಬ್ಬಳ್ಳಿ-ಕಾರವಾರ ರಸ್ತೆಯ ಚಾಟ್ನಿ ಕಾಂಪ್ಲೆಕ್ಸ್ ಬಳಿ ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪವರ ಟಿವಿ ಕ್ಯಾಮರಾಮನ್ ಸುನೀಲ, ಚಿಕಿತ್ಸೆ ಫಲಿಸದೇ ಕಿಮ್ಸನಲ್ಲಿ ತಡರಾತ್ರಿ ತೀರಿಕೊಂಡಿದ್ದಾನೆ.
ಹುಬ್ಬಳ್ಳಿಯ ಸುನೀಲ ತೀರಾ ಲವಲವಿಕೆಯಿಂದ ಇರುತ್ತಿದ್ದ ಯುವಕ. ಎಲ್ಲರೊಂದಿಗೆ ಬೆರೆಯುತ್ತಲೇ ತನ್ನ ಕರ್ತವ್ಯ ನಿಭಾಯಿಸುತ್ತಿದ್ದ ಸುನೀಲ ಪಾಚಂಗೆ ಇನ್ನಿಲ್ಲವೆನ್ನುವುದು ಪತ್ರಕರ್ತರಿಗೆ ಸಹಿಸಲಾರದ ನೋವಾಗಿದೆ.
ದಿನಬೆಳಗಾದರೇ ನೂರೆಂಟು ಜನರ ಸಮಸ್ಯೆಗಳ ಆಲಿಕೆಗೆ ಅವುಗಳನ್ನ ಸಂಬಂಧಿಸಿದವರಿಗೆ ಮುಟ್ಟಿಸೋಕೆ ತನ್ನ ಕ್ಯಾಮರಾದಿಂದಲೇ ಚುರುಕು ಮುಟ್ಟಿಸುವ ಯುವಕ ಸುನೀಲ. ಕಳೆದ ಮೂರು ದಿನದಿಂದ ಕಿಮ್ಸನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ನಿನ್ನೆಯಷ್ಟೇ, ಸ್ವಲ್ಪ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಹೇಳಲಾಗಿತ್ತಾದರೂ, ಬದುಕುಳಿಯುವಂತ ಚೇತರಿಕೆ ಕಂಡು ಬರದೇ ಇರುವುದು ಪ್ರತಿಯೊಬ್ಬರಿಗೂ ದುಃಖವನ್ನುಂಟು ಮಾಡಿದೆ.
ಪ್ರಿಯ ಸುನೀಲ, ನೀನು ಸಣ್ಣ ವಯಸ್ಸಿನಲ್ಲೇ ಈ ಭ್ರಮಾಲೋಕದಿಂದ ದೂರ ಹೋಗಿದ್ದೀಯಾ. ನೀ ಇಲ್ಲಾ ಎನ್ನುವುದನ್ನ ನಿಮ್ಮ ಕುಟುಂಬದವರಿಗೆ ಸಹಿಸುಕೊಳ್ಳೋದು ತುಂಬಾ ಕಷ್ಟ. ಆದರೆ, ಪ್ರತಿಯೊಬ್ಬರು ನಿನ್ನ ನೆನಪಲ್ಲೇ ಸದಾಕಾಲ ಕ್ಷಣವನ್ನ ಕಳೆಯುವುದು ನಿಶ್ಚಿತ..
ಹೋಗಿ ಬಾ ಗೆಳೆಯ….

