ತಾಯಿಯ ಕಣ್ಣೀರು ತಪ್ಪಿಸಲು ಟ್ರೇನರ್ ಇದ್ದವ್-ಆಫೀಸ್ ಬಾಯ್ ಆಗಿದ್ದಾ: ಇಂದು ಜಿಲ್ಲಾ ಪ್ರಶಸ್ತಿಗೆ ಭಾಜನ..
1 min readಹುಬ್ಬಳ್ಳಿ: ಬದುಕು ಎಲ್ಲಿಂದ ಎಲ್ಲಿಗೆ ಹೊರಳತ್ತೋ ಯಾರಿಗೂ ಗೊತ್ತಾಗುವುದೇ ಇಲ್ಲಾ. ಒಂದೇ ಒಂದು ಬಾರಿಯೂ ಮೀಡಿಯಾಗೆ ಬರಬೇಕೆಂದು ಯೋಚಿಸದ ಯುವಕನೋರ್ವ ಹೆತ್ತವ್ವಳ ಕಣ್ಣೀರು ತಪ್ಪಿಸಲು ಬರೋಬ್ಬರಿ 28 ಸಾವಿರ ರೂಪಾಯಿ ಸಂಬಳದ ಟ್ರೇನರ್ ನೌಕರಿ ಬಿಟ್ಟು, 3 ಸಾವಿರ ರೂಪಾಯಿಯ ಆಫೀಸ್ ಬಾಯ್ ಕೆಲಸಕ್ಕೆ ಸೇರಿದ್ದ.
ಹೌದು.. ಕಳೆದ ಮೂರು ವರ್ಷದಿಂದ ಫಸ್ಟ್ ನ್ಯೂಸ್ ಚಾನಲ್ ನಲ್ಲಿ ಕ್ಯಾಮರಾಮನ್ ಆಗಿರುವ ಪ್ರಕಾಶ ಮುಳ್ಳೊಳ್ಳಿಯ ಬದುಕು ಸೋಜಿಗ ಮತ್ತು ಅಚ್ಚರಿ ಪಡುವಷ್ಟಿದೆ. ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಯಲ್ಲಪ್ಪ ಮತ್ತು ಚೆನ್ನಬಸವ್ವಾರ ಪುತ್ರ ಪ್ರಕಾಶ. ಕಲಿತಿದ್ದು ಪಿಯುಸಿ. ಆದರೆ, ಬದುಕಲ್ಲಿ ಎಲ್ಲರಿಗೂ ಮೀರಿಸಿ ಬೆಳೆಯುವ ಹವ್ಯಾಸ ಬೆಳೆಸಿಕೊಂಡಿದ್ದ.
ಅದೇ ಕಾರಣಕ್ಕೆ ಮಲ್ಲಕಂಬವನ್ನ ತನ್ನ ಜೀವನದ ಉಸಿರನ್ನಾಗಿಸಿಕೊಳ್ಳಬೇಕೆಂಬ ಕಲ್ಪನೆಯಿಂದ ದುಡಿಯದೊಡಗಿದ. ಬೆಂಗಳೂರಿನಲ್ಲಿರುವ ರವಿ ಬೆಳಗೆರೆಯವರ ಪ್ರಾರ್ಥನಾ ಶಾಲೆಯಲ್ಲಿ ಟ್ರೇನರ್ ಆಗಿ ಸೇರಿಕೊಂಡ. ಥೈಲ್ಯಾಂಡಗೂ ಹೋಗಿ ಮಲ್ಲಕಂಬದ ತರಬೇತಿ ನೀಡಿದ್ದ. ಖ್ಯಾತ ಚಿತ್ರನಟ ಪುನೀತ ರಾಜಕುಮಾರ ಜೊತೆಗೆ ಅಣ್ಣಾ ಬಾಂಡ್ ಸಿನೇಮಾದಲ್ಲಿ ಮಲ್ಲಕಂಬದೊಂದಿಗೆ ಕಾಣಿಸಿಕೊಂಡ. ಬದುಕಿನ ಮಗ್ಗಲು ಬದಲಿಸಿತ್ತು.
ಪ್ರಶಸ್ತಿಗೆ ಕಾರಣವಾಗಿರೋ ದೃಶ್ಯಾವಳಿಗಳಿವು..
ಪ್ರತಿಷ್ಠಿತರೊಬ್ಬರ ಬಳಿ ಬರುವ ನೂರಾರೂ ಭಕ್ತರಿಗೆ ಟ್ರೇನರ್ ಆಗುವ ಸೌಭಾಗ್ಯ ದೊರಕಿತು. ಕೈ ತುಂಬ ಸಂಬಳ ಬೇರೆ. ಜೀವನಕ್ಕೆ ತೊಂದರೆಯಿಲ್ಲವೆಂದುಕೊಂಡು ಕರ್ತವ್ಯದಲ್ಲಿದ್ದಾಗಲೇ ಪ್ರತಿಷ್ಠಿತರ ಮನೆ ಬಾಗಿಲಿಗೆ ಬೀಗ ಬೀಳುವ ವದಂತಿ ಹಬ್ಬಿತ್ತು. ಇದನ್ನ ನೋಡಿ, ತಾಯಿ ಕಣ್ಣೀರಾಗತೊಡಗಿದ್ದಳು, ಪ್ರಕಾಶ ತಂದೆಯಿಲ್ಲದಿದ್ದರೂ ದಾರಿ ತಪ್ಪದೇ ತಾಯಿಯ ಮನಸ್ಸಿಗೆ ಖುಷಿ ಕೊಡಲು ಕೆಲಸ ಬಿಟ್ಟು ಬಂದಿದ್ದ.
ಹಿರೇಹರಕುಣಿ ಗ್ರಾಮದಲ್ಲಿದ್ದು ಏನು ಮಾಡಬೇಕೆಂದು ಕಾಯ್ದುಕೊಂಡಾಗ ಭೇಟಿಯಾಗಿದ್ದು ಆಗ ಉದಯ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ ಪಟ್ಟೇದ. ತಮ್ಮ ಪರಿಚಯದ ಪ್ರಕಾಶ ನೂಲ್ವಿಯವರ ಮೂಲಕ, ಟಿವಿ9 ಕಚೇರಿಯಲ್ಲಿ ಆಫೀಸ್ ಬಾಯ್ ಕೆಲಸಕ್ಕೆ ಹಚ್ಚಿದ್ದರೆಂದು ಪ್ರಕಾಶ ಸ್ಮರಿಸಿಕೊಳ್ಳುತ್ತಾನೆ.
ಅಲ್ಲಿಯೇ ಕ್ಯಾಮಮರಾಮನ್ ಗಳಾಗಿದ್ದ ಸದಾನಂದ, ನಿಂಗಪ್ಪ ಹಾಗೂ ಶಿವಾಜಿ ಲಾತೂರಕರ ತನ್ನನ್ನ ಯಾವತ್ತೂ ಆಫೀಸ್ ಬಾಯ್ ಥರ ನೋಡದೇ ಕ್ಯಾಮರಾದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅಲ್ಲಿಂದ ಕೊಪ್ಪಳಕ್ಕೆ ಕಸ್ತೂರಿಗೆ ಚಾನಲ್ ಗೆ ಹೋದಾಗ, ಅಲ್ಲಿದ್ದ ಬಿಟಿವಿಯ ರವಿಕುಮಾರ ಮತ್ತು ಪವನ ದೇಶಪಾಂಡೆ ನನಗೆ ಸ್ಪೂರ್ತಿ ನೀಡಿದ್ದರು.. ಅಲ್ಲಿಂದ ಒಂದು ವರ್ಷ ಪಬ್ಲಿಕ್ ಟಿವಿಯಲ್ಲೂ ಕೆಲಸ ಮಾಡಿ ನಂತರ ಫಸ್ಟ್ ನ್ಯೂಸ್ ಗೆ ಬಂದಿರುವುದಾಗಿ ಪ್ರಕಾಶ ನೆನಪಾಗಿಸಿಕೊಳ್ಳುತ್ತಾನೆ.
ಇಂತಹ ಪ್ರಕಾಶ, “ಕಾಂಕ್ರೀಟ್ ಕಾಡಲ್ಲಿ ಚಂಬು ಕುಟುಕಿದ ಜೀವನ” ವನ್ನ ಬರೋಬ್ಬರಿ 22 ದಿನಗಳವರೆಗೆ ಚಿತ್ರೀಕರಣ ಮಾಡಿದ್ದಾನೆ. ಗೂಡು ಕಟ್ಟುವುದರಿಂದ ಹಿಡಿದು ಮರಿಗಳು ಹಾರುವವರೆಗೂ ಶೂಟ್ ಮಾಡಿರುವುದು ನೋಡಗರ ಮನ ಸೆಳೆಯುತ್ತದೆ.
ತಾಯಿಯ ಜೊತೆ ಸುಂದರ ಬದುಕು ಕಟ್ಟಿಕೊಳ್ಳುವ ಜೊತೆಗೆ ಮಲ್ಲಕಂಬದ ಆಸಕ್ತಿಯನ್ನ ಉಳಿಸಿಕೊಂಡಿರುವ ಪ್ರಕಾಶ ಮುಳ್ಳೊಳ್ಳಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಅತ್ಯುತ್ತಮ ಟಿವಿ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿದ್ದು, ಇದೇ ತಿಂಗಳ 10ರಂದು ಪ್ರಶಸ್ತಿಯನ್ನ ಸ್ವೀಕರಿಸಲಿದ್ದಾರೆ.
“ಪ್ರಕಾಶ” ನಿನ್ನ ಹೆಸರನಲ್ಲೇ ಎಲ್ಲ ಇರುವುದರಿಂದ ನಿನ್ನ ಬೆಳಗಿನಲ್ಲಿ ಎಲ್ಲರಿಗೂ ಹಸನ್ಮುಖಿ ಮಾಡು ಎನ್ನುತ್ತ, ನಿನಗೆ ಒಳ್ಳೆಯದಾಗಲಿ.. ಕಂಗ್ರಾಟ್ಸ್..