ಧಾರವಾಡ ಬೈಪಾಸ್‌ನಲ್ಲಿ “ಸರಣಿ ಅವಘಡ”- ಕೆಳಗೆ ಬಿದ್ದ ಗ್ಯಾಸ್ ಕಂಟೇನರ್- ಸಂಚಾರ ಅಸ್ತವ್ಯಸ್ತ…!!!

ಧಾರವಾಡ: ಸರಣಿ ಅಪಘಾತ ಧಾರವಾಡ ಹೊರವಲಯದ ಬೈಪಾಸ್‌ನಲ್ಲಿ ನಡೆದಿದ್ದು, ಚಿಕ್ಕ ಗಾತ್ರದ ಗ್ಯಾಸ್ ಕಂಟೇನರ್‌ಗಳು ಕೆಳಗೆ ಬಿದ್ದಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಸುಮಾರು ಒಂದೂವರೆ ಗಂಟೆಯಿಂದ ಬೈಪಾಸ್ ಸಂಚಾರ ಸಮಸ್ಯೆಯಾಗಿದ್ದು, ಮೂರು ಲಾರಿಗಳ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Exclusive Videos…
ಸ್ಥಳದಲ್ಲಿ ಇನ್ಸಪೆಕ್ಟರ್ ಶಿವಾನಂದ ಕಮತಗಿ ಅವರು ಬೀಡು ಬಿಟ್ಟಿದ್ದು, ಯಾವುದೇ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡುತ್ತಿದ್ದಾರೆ. ಕೆಳಗೆ ಬಿದ್ದಿರುವ ಸಣ್ಣ ಪ್ರಮಾಣದ ಗ್ಯಾಸ್ ಕಂಟೇನರ್‌ಗಳು ಯಾವುದೇ ಥರದ ‘ಲೀಕ್’ ಆಗುತ್ತಿಲ್ಲ. ಹಾಗಾಗಿ ಬಹುದೊಡ್ಡ ಅವಘಡ ತಪ್ಪಿದಂತಾಗಿದೆ.