Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಬೈಕ್ ಕಳ್ಳತನ ಹೇಗೆ ನಡಿತೀವೆ ಗೊತ್ತಾ..Exclusive videos

1 min read
Spread the love

ಹುಬ್ಬಳ್ಳಿ: ದಿನಬೆಳಗಾದರೇ ಸಾಕು ಒಂದಿಲ್ಲಾ ಒಂದು ಪ್ರದೇಶದಲ್ಲಿ ಬೈಕ್ ಕಳ್ಳತನದ ಪ್ರಕರಣಗಳು ಕಂಡು ಬರತೊಡಗಿದ್ದು, ಯುವಕರೇ ಕಳ್ಳತನಕ್ಕೆ ಇಳಿದಿರುವ ಸಾಧ್ಯೆತಗಳು ಕಂಡು ಬರುತ್ತಿವೆ. ಏಕಂದ್ರೇ, ಸಿಸಿಟಿವಿ ದೃಶ್ಯಗಳಲ್ಲಿ ಅವರ ಚಲವಲನಗಳಿಂದ ಗೊತ್ತಾಗುತ್ತಿದೆ.

ಸಿಸಿಟಿವಿ ದೃಶ್ಯ

ಅವಳಿನಗರದಲ್ಲಿನ ನಿವಾಸಿಗಳು ಹೆಚ್ಚು ಬೆಲೆಯ ದ್ವಿಚಕ್ರ ವಾಹನಗಳನ್ನ ಹೊರಗಡೆ ನಿಲ್ಲಿಸಿ ರಾತ್ರಿ ಮಲಗಿದರೇ ಬೆಳಗಾಗುವುದರೊಳಗೆ ಬೈಕ್ ನಾಪತ್ತೆಯಾಗಿರತ್ತೆ. ಅದಕ್ಕೆ ಕಾರಣವಾಗಿರೋ ದೃಶ್ಯಗಳು ಕರ್ನಾಟಕವಾಯ್ಸಗೆ ಲಭಿಸಿದ್ದು, ವ್ಯವಸ್ಥಿತವಾಗಿಯೇ ಬೈಕ್ ಕಳ್ಳತನ ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತಿದೆ.

ಸಿಸಿಟಿವಿ ದೃಶ್ಯ

ಕೇಶ್ವಾಪುರದಲ್ಲಿ ಕೆಲವು ದಿನಗಳ ಹಿಂದಷ್ಟೇ ಎರಡು ಬೈಕಗಳನ್ನ ಕಳ್ಳತನ ಮಾಡಲಾಗಿತ್ತು. ಇದೀಗ ನವನಗರದ ಠಾಣೆ ವ್ಯಾಪ್ತಿಯಲ್ಲೂ ಕಳ್ಳತನ ನಡೆಯುತ್ತಿದೆ ಎಂದು ಗೊತ್ತಾಗಿದೆ.

ಬೆಲೆಬಾಳು ಬೈಕಗಳನ್ನ ಟಾರ್ಗೆಟ್ ಮಾಡಲಾಗತ್ತೆ. ಎರಡ್ಮೂರು ದಿನ ವಾಚ್ ಮಾಡಿ, ನಂತರ ಕದಿಯುವ ಸ್ಕೆಚ್ ರೂಪಿಸಲಾಗತ್ತೆ ಎನ್ನುವುದು ಸಿಸಿಟಿವಿಯಿಂದ ಗೊತ್ತಾಗುತ್ತಿದೆ.


Spread the love

Leave a Reply

Your email address will not be published. Required fields are marked *