ಹುಬ್ಬಳ್ಳಿಯಲ್ಲಿ ನಾಲ್ಕು ಬೈಕ್ ಸಮೇತ ಕಳ್ಳನ ಬಂಧನ
1 min readಹುಬ್ಬಳ್ಳಿ: ನಿರಂತರವಾಗಿ ನಡೆಯುತ್ತಿದ್ದ ಬೈಕ್ ಕಳ್ಳತನ ಪ್ರಕರಣ ಭೇದಿಸುವಲ್ಲಿ ಕೇಶ್ವಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಓರ್ವನನ್ನ ಬಂಧಿಸಿ ನಾಲ್ಕು ಬೈಕುಗಳನ್ನ ವಶಕ್ಕೆ ಪಡೆಯಲಾಗಿದೆ. ಧಾರವಾಡ ವಿದ್ಯಾಗಿರಿ ನಿವಾಸಿ ಅಪ್ಪಯ್ಯ ಅಲಿಯಾಸ್ ಅಪ್ಯಾ ರಾಚಯ್ಯ ಬೆಂಡಿಗೇರಿಮಠ ಎಂಬಾತನನ್ನ ಬಂಧನ ಮಾಡಲಾಗಿದ್ದು, ನಾಲ್ಕು ಬೈಕಗಳನ್ನ ವಶಕ್ಕೆ ಪಡೆಯಲಾಗಿದೆ.
1] KA-25, EE-8178 Black Pulser
2] KA-25, ER-1287 Black Splender Plus
3] KA-25, EF-3358 Black Hero Honda Splender Pro
4] KA-25, U-1448 Black Hero Honda Splender Pro
ಆರೋಪಿಯಿಂದ ವಶಕ್ಕೆ ಪಡೆದಿರುವ ಬೈಕಗಳ ಒಟ್ಟು ಮೌಲ್ಯ 1ಲಕ್ಷ ರೂಪಾಯಿಯಾಗಿದೆ ಎಂದು ಪೊಲೀಸರು ಅಂದಾಜಿಸಲಾಗಿದೆ.
ಕೇಶ್ವಾಪೂರ ಪೊಲೀಸ್ ಠಾಣೆ ಹುಬ್ಬಳ್ಳಿ ಸುರೇಶ ಕುಂಬಾರ, ಪಿಎಸ್‌ಐ
ಸದಾಶಿವ ಕಾನಟ್ಟಿ, ಸಿಬ್ಬಂದಿಗಳಾದ ಎಂ.ಡಿ.ಕಾಲವಾಡ, ಡಿ.ವಾಯ್.ಭಜಂತ್ರಿ, ಎಸ್.ಪಿ.ಕಾಳೆ, ಆರ್.ಎಲ್.ರಾಠೋಡ, ಆರ್.ಪಿ.ಕೆಂದೂರ, ವಿ.ಎ.ಅಳಗವಾಡಿ, ಹೆಚ್.ಬಿ.ಮಾಡೊಳ್ಳಿ, ಶರಣಪ್ಪ
ಕರೆಯಂಕಣ್ಣವರ ಕಾರ್ಯಾಚರಣೆ ನಡೆಸಿದ್ದಾರೆ.