Posts Slider

Karnataka Voice

Latest Kannada News

ಉಸ್ತುವಾರಿ ಸಚಿವ ಶೆಟ್ಟರ ಏರಿಯಾದಲ್ಲೇ ಎರಡು ಬೈಕ್ ಕಳ್ಳತನ

Spread the love

ಹುಬ್ಬಳ್ಳಿ: ವಾಣಿಜ್ಯನಗರದಲ್ಲಿ ಬೈಕ್ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದ್ದು, ಮತ್ತೆರಡು ಪ್ರದೇಶದಲ್ಲಿ ಎರಡು ಹೀರೊ ಸ್ಪ್ಲೆಂಡರ್ ದ್ವಿಚಕ್ರವಾಹನಗಳನ್ನ ಕಳ್ಳತನ ಮಾಡಿದ್ದು, ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಬೆಲೆಬಾಳುವ ಮೂರು ಮೊಬೈಲ್ ಗಳನ್ನ ಕಳ್ಳರನ ಮಾಡಲಾಗಿದೆ.

ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಎ-25 ಇಕ್ಯೂ-3089 ಸಂಖ್ಯೆಯ ದ್ವಿಚಕ್ರವನ್ನ ಮನೆ ಮುಂದೆ ನಿಲ್ಲಿಸಿದಾಗ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಮನೆ ಮುಂದಿನ ಖಾಲಿ ಜಾಗೆಯಲ್ಲಿ ಪಾರ್ಕ್ ಮಾಡಿ ಬಂದು ಮಲಗಿ, ಬೆಳಿಗ್ಗೆ ಎದ್ದು ನೋಡಿದಾಗ ಬೈಕ್ ಕಳ್ಳತನವಾಗಿರುವುದು ಗೊತ್ತಾಗಿದೆ.

ಹ್ಯಾಂಡಲ್ ಲಾಕ್ ಮಾಡಿದ ಕೆಎ-25, ಇಎಕ್ಸ್-9494 ಸಂಖ್ಯೆಯ ವಾಹನವನ್ನ ಕಳ್ಳತನ ಮಾಡಲಾಗಿದೆ. ಎರಡು ಬೈಕ್ ಗಳ ಮೌಲ್ಯವನ್ನ 55ಸಾವಿರ ರೂಪಾಯಿಯಂದು ಅಂದಾಜಿಸಲಾಗಿದೆ.

ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸಂಗೊಳ್ಳಿರಾಯಣ್ಣ ನಿಸರ್ಗ ಲೇ ಔಟ್ ನ ಮನೆಯೊಂದರಲ್ಲಿ ಮೂರು ಮೊಬೈಲ್ ಗಳನ್ನ ಕಳ್ಳತನ ಮಾಡಿದ್ದು, ಮೊಬೈಲ್ ಬೆಲೆ 42000 ರೂಪಾಯಿ ಎಂದು ಅಂದಾಜಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ.


Spread the love

Leave a Reply

Your email address will not be published. Required fields are marked *