ಬೈಕಿಗೆ ಕಾರು ಡಿಕ್ಕಿ: ಗ್ಲಾಸ್ ಗೆ ಹೋಗಿ ಬಿದ್ದ ಸವಾರ- ಪರಿಸ್ಥಿತಿ ಗಂಭೀರ: ಹುಬ್ಬಳ್ಳಿಯಲ್ಲಿ ನಡೆದ ಘಟನೆ
1 min readಹುಬ್ಬಳ್ಳಿ: ದ್ವಿಚಕ್ರವಾಹನಕ್ಕೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಕಾರಿನ ಗ್ಲಾಸ್ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ನವೀನ ಪಾರ್ಕ್ ಬಳಿ ಸಂಭವಿಸಿದೆ.
ಗೋಪನಕೊಪ್ಪದ ನಿವಾಸಿಯಾಗಿರುವ ಬೈಕ್ ಸವಾರ ಯಮನಪ್ಪ ಹಾವನೂರ ಎಂಬಾತನ ಬೈಕಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸ ಎಷ್ಟಿತ್ತೆಂದರೇ, ಕಾರಿನ ಗ್ಲಾಸಿಗೆ ಹೋಗಿ ಬಿದ್ದಿದ್ದಾನೆ. ಕಾರಿನ ಗಾಜು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗಾಯಾಳುವನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕಾರು ಪರ್ನಾಂಡೀಸ್ ಎಂಬುವರಿಗೆ ಸೇರಿದ್ದಾಗಿದ್ದು, ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.