Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಮನೆ ಮುಂದೆ ಬೈಕ್ ನಿಲ್ಲಸ್ತೀರಾ.. ? ಹಾಗಾದ್ರೇ ನಿಮಗೆ ಅಧೋಗತಿ ಕಾದಿದೆ..!

1 min read
Spread the love

ಹುಬ್ಬಳ್ಳಿ: ನೀವೂ ಬೈಕ್ ಗಳನ್ನ ಮನೆ ಮುಂದೆ ನಿಲ್ಲಿಸಿ ಅರಾಮಾಗಿ ಮಲಗಿದ್ದರೇ ಬೆಳಗಾಗುವುದರೊಳಗೆ ನಿಮ್ಮ ಬೈಕ್ ನಿಮಗೆ ಗೊತ್ತಾಗದ ಪರಿಸ್ಥಿತಿಯಲ್ಲಿ ಕಾಣಸಿಗತ್ತೆ. ಅಸಲಿಗೆ ಏನಾಗಿದೆ ಅನ್ನೋದನ್ನ ನೀವು ಈ ಸುದ್ದಿಯನ್ನ ಪೂರ್ಣ ಓದಿದರೇ ಗೊತ್ತಾಗುತ್ತೆ.

ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ನಿನ್ನೆ ರಾತ್ರಿ ಚರಂತಯ್ಯಾ ಎಂಬುವರು ತಮ್ಮ ಮನೆ ಮುಂದೆ ರಾತ್ರಿ ಬೈಕ್ ಇಟ್ಟು ಮಲಗಿದ್ದಾರೆ. ಆದ್ರೆ, ಬೆಳಿಗ್ಗೆ ಎದ್ದು ನೋಡಿದ್ರೆ ಇದು ಅವರ ಗಾಡಿಯೇ..? ಎಂಬ ಅನುಮಾನ ಮೂಡುವಂತೆ ಕಳ್ಳರು ಬೈಕಿನ ಪರಿಸ್ಥಿತಿ ಮಾಡಿದ್ದಾರೆ.

ಬೈಕಿನ ಪೆಟ್ರೋಲ್ ಟ್ಯಾಂಕ್, ಸೀಟ್  ಹಾಗೂ ಇನ್ನಿತರ ಬಿಡಿ ಭಾಗಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯನ್ನ ತಾವೂ ಎಚ್ಚರವಾಗಿ ನೋಡಿ, ನಿಮ್ಮ ಬೈಕ್ ಗಳನ್ನ ಹುಷಾರಾಗಿ ನೋಡಿಕೊಳ್ಳಿ.


Spread the love

Leave a Reply

Your email address will not be published. Required fields are marked *