11 ಬೈಕ್ ಸಮೇತ ಸಿಕ್ಕವರು -ಗೌಂಡಿ, ಪ್ಲಂಬರ್, ಆಟೋ ಡ್ರೈವರ್ ಗಳು: ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರ ಕಾರ್ಯಾಚರಣೆ
1 min readಹುಬ್ಬಳ್ಳಿ: ಅವಳಿನಗರದಲ್ಲಿ ಹೆಚ್ಚುತ್ತಿರುವ ಬೈಕ್ ಕಳ್ಳತನವನ್ನ ಪತ್ತೆ ಹಚ್ಚುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, 11 ಬೈಕುಗಳ ಸಮೇತ ನಾಲ್ವರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೌಂಡಿ ಕೆಲಸ ಮಾಡುವ ಹುಬ್ಬಳ್ಳಿ ದೇಶಪಾಂಡೆನಗರದ ವಡ್ಡರ ಓಣಿ ನಿವಾಸಿಯಾಗಿರುವ ಹನಮಂತ ಮಣ್ಣವಡ್ಡರ, ಆಟೋಚಾಲಕ ರಾಯನಾಳ ಗ್ರಾಮದ ಚಂದ್ರಶೇಖರ ಗುದ್ದಿ, ಹುಬ್ಬಳ್ಳಿ ಸೆಟ್ಲಮೆಂಟ್ ಗಂಗಾಧರ ನಗರದ ಆಟೋ ಚಾಲಕ ವಿನಾಯಕ ಮೈಸೂರು ಹಾಗೂ ಪ್ಲಂಬರ್ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದ ವಿರೇಶ ಶಿವಾನಂದ ಅಂಗಡಿ ಎಂಬ ನಾಲ್ವರನ್ನ ಬಂಧನ ಮಾಡಿರುವ ಉಪನಗರ ಠಾಣೆ ಪೊಲೀಸರು, ಇವರಿಂದ 11 ವಿವಿಧ ಕಂಪನಿಯ ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.
ಕಳ್ಳರು ಹುಬ್ಬಳ್ಳಿ-ಧಾರವಾಡ ಮತ್ತು ಗದಗನಲ್ಲಿ ಕಳ್ಳತನ ಮಾಡಿದ್ದ ಪ್ರಕರಣಗಳು ಪತ್ತೆಯಾಗಿವೆ. ಬಂಧಿತರಿಂದ ವಶಕ್ಕೆ ಪಡೆದ ಬೈಕಗಳ ಮೌಲ್ಯ ಅಂದಾಜು 4.87.000 ರೂಪಾಯಿಗಳಾಗಿವೆ. ಆರೋಪಿಗಳು ದ್ವಿಚಕ್ರ ವಾಹನಗಳ ಕೀಲಿ ಡೈರೆಕ್ಟ್ ಮಾಡಿ ಕಳ್ಳತನ ನಡೆಸುತ್ತಿದ್ದರೆಂದು ಗೊತ್ತಾಗಿದೆ.
ಪೊಲೀಸ್ ಇನ್ಸಪೆಕ್ಟರ್ ಎಸ್.ಕೆ.ಹೊಳೆಣ್ಣನವರ, ಪಿಎಸ್ಐ ಸೀತಾರಾಮ್, ಸಿಬ್ಬಂದಿಗಳಾದ ಸುನೀಲ ಪಾಂಡೆ, ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಉಮೇಶ ಹೆದ್ದೇರಿ, ರೇಣು ಸಿಕ್ಕಲಗಾರ, ರವಿ ಹೊಸಮನಿ, ಮಾಬುಸಾಬ ಮುಲ್ಲಾ, ಮಂಜು ಕಮತದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.