ಕಾರಲ್ಲಿ ಒಮ್ಮೆಗೆ ಡೋರ್ ತೆಗೀತೀರಾ.. ನೋಡಿಲ್ಲಿ ಹೇಗೆ ಜೀವ ಹೋಗತ್ತೆ ಅಂತಾ..! ಹುಬ್ಬಳ್ಳಿಯಲ್ಲಿನ ಘಟನೆ
ಹುಬ್ಬಳ್ಳಿ: ಮಾರುಕಟ್ಟೆಗೆ ಹೋಗಲು ಬೈಕಿನಲ್ಲಿ ಯುವಕ ಬರುತ್ತಿದ್ದಾಗ ಮುಂದೆ ಹೋಗುತ್ತಿದ್ದ ಓಮಿನಿಯಾತ ಡೋರ್ ತೆಗೆದ ಪರಿಣಾಮ ಬೈಕಿಗೆ ಬಡಿದು, ಕಬ್ಬಿಣದ ಕಂಬಕ್ಕೆ ಬೈಕ್ ಬಡಿದು ಯುವಕ ಮೃತಪಟ್ಟ ಘಟನೆ ಗಬ್ಬೂರ ಬಳಿ ನಡೆದಿದೆ. ಅಬ್ದುಲ್ ರಜಾಕ್ ಅಮೀನಸಾಬನವರ ಎಂಬ ಯುವಕನೇ ಮೃತಪಟ್ಟಿದ್ದು, ಮಾರುಕಟ್ಟೆಯಲ್ಲಿ ವಸ್ತುಗಳನ್ನು ತರಲು ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ.
ತಾವು ವಾಹನದಲ್ಲಿ ಹೊರಟಿದ್ದೇವೆ ಎಂದುಕೊಂಡು ಹಿಂದೆ ಮುಂದೆ ನೋಡದೇ ಡೋರ್ ತೆಗೆದರೇ ಇಂತಹ ಅವಘಡಗಳು ಸಂಭವಿಸುತ್ತವೆ ಎಂಬುದನ್ನ ಈ ಘಟನೆಯನ್ನಾದರೂ ನೋಡಿ ಕಲಿಯಬೇಕಿದೆ.
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓಮಿನಿ ಚಾಲಕನಿಗಾಗಿ ಹುಡುಕಾಟ ನಡೆದಿದೆ.
                      
                      
                      
                      
                      