ಬೆಣ್ಣೆಹಳ್ಳದಲ್ಲಿ “ಬ್ಯಾಹಟ್ಟಿಯ ಆನಂದ” ಕೊಚ್ಚಿಕೊಂಡು ಹೋಗಿರೋ Exclusive Video…
 
        ಹುಬ್ಬಳ್ಳಿ: ನಾಲ್ವರು ಗೆಳೆಯರು ಕೂಡಿಕೊಂಡು ಇಂಗಳಳ್ಳಿ ಗ್ರಾಮಕ್ಕೆ ಹೊರಟಾಗಲೇ ಧೋ ಎಂದು ಮಳೆ ಸುರಿದು ಹಳ್ಳ ತುಂಬಿ ಹರಿಯುತ್ತಿರುವಾಗಲೇ ಕೈ ಕೈಹಿಡಿದು ದಾಟಲು ಪ್ರಯತ್ನ ನಡೆಸುತ್ತಿದ್ದಾಗಲೇ, ಎಲ್ಲರೂ ನೀರಿನ ಸೆಳವಿಗೆ ಸಿಲುಕಿದ ಘಟನೆ ಇಂಗಳಳ್ಳಿ ಬಳಿ ಸಂಭವಿಸಿದೆ.
ಬ್ಯಾಹಟ್ಟಿ ಗ್ರಾಮದ ಆನಂದ ಹಿರೇಗೌಡರ ಮಾತ್ರ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಪೊಲೀಸರಿದ್ದಾಗಲೇ ಈ ಘಟನೆ ನಡೆದಿದ್ದು, ಸಾರ್ವಜನಿಕರು ಕೂಡಾ ಅವರನ್ನ ಹೋಗದಂತೆ ತಡೆಯುತ್ತಿರುವ ವೀಡಿಯೋ ವೈರಲ್ ಆಗಿದೆ. ಆ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ.
ಬ್ಯಾಹಟ್ಟಿ ಗ್ರಾಮದ ಆನಂದ ಹಿರೇಗೌಡರ, ಅವರ ಪಾಲಕರಿಗೆ ಒಬ್ಬನೇ ಮಗನಾಗಿದ್ದ. ಈತನ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನ ಮುಂದುವರೆಸಿದ್ದಾರೆ.
 
                       
                       
                       
                       
                      
 
                         
                 
                 
                