ಚೆನ್ನಮ್ಮ ವೃತ್ತದಲ್ಲೇ ಸಿಕ್ಕಿಬಿದ್ದ ಬಸ್ ಬ್ಯಾಗ್ ಕಳ್ಳ: ಹೇಗಿದ್ದಾನೆ ಗೊತ್ತಾ ಮೀಸೆ ಮಾವ..!

ಹುಬ್ಬಳ್ಳಿ: ಸಾರಿಗೆ ಸಂಸ್ಥೆಯ ಬಸ್ಸಗಳಲ್ಲಿ ಬ್ಯಾಗುಗಳನ್ನ ಕದಿಯುತ್ತಿದ್ದ ಚೋರನನ್ನ ಹಿಡಿಯುವಲ್ಲಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನೇ ಯಶಸ್ವಿಯಾಗಿದ್ದು, ಉಪನಗರ ಠಾಣೆ ಪೊಲೀಸರಿಗೆ ಆರೋಪಿಯನ್ನ ಹಿಡಿದು ಕೊಟ್ಟಿದ್ದಾರೆ.
ದೂರದ ಪ್ರಯಾಣ ಮುಗಿಸಿ ಬಂದು ಬಸ್ ನಿಲ್ದಾಣದಲ್ಲಿ ವಾಹನ ನಿಲ್ಲಿಸಿದ ತಕ್ಷಣವೇ ಒಳಗೆ ಹೊಗುತ್ತಿದ್ದ ವೀರೇಶ ಎಂಬಾತ ಚೆನ್ನಾಗಿ ಕಾಣುವ ಬ್ಯಾಗುಗಳನ್ನ ಎಗರಿಸಿ ಪರಾರಿಯಾಗುತ್ತಿದ್ದ. ಇಂದು ಕೂಡಾ ಹಾಗೇಯೇ ಮಾಡುತ್ತಿದ್ದಾಗ ಬಸ್ ಚಾಲಕ ಆರೋಪಿಯನ್ನ ಹಿಡಿದಿದ್ದಾನೆ.
ಚೆನ್ನಮ್ಮ ವೃತ್ತದಲ್ಲಿ ನಿಂತಿದ್ದ ಪೊಲೀಸರಿಗೆ ಆರೋಪಿಯನ್ನ ಕೊಟ್ಟಿದ್ದು, ಪೊಲೀಸರು ಆರೋಪಿಯನ್ನ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ.