Posts Slider

Karnataka Voice

Latest Kannada News

ಬುಲೆಟ್ ಪ್ರಕಾಶ ಇನ್ನಿಲ್ಲ: ಮರೆಯಾದ ಹಾಸ್ಯ ಕಲಾವಿದ

1 min read
Spread the love

ಬೆಂಗಳೂರು: ಕಿಡ್ನಿ ವೈಪಲ್ಯದಿಂದ ನರಳುತ್ತಿದ್ದ ಹಾಸ್ಯ ಕಲಾವಿದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಬುಲೆಟ್ ಪ್ರಕಾಶ, ಈಗಷ್ಟೇ ನಿಧನರಾದರು. ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಬುಲೆಟ್, ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದರು. ನೂರಾರೂ ಸಿನಿಮಾಗಳಲ್ಲಿ ನಟಿಸಿರುವ ಬುಲೆಟ್ ಪ್ರಕಾಶ, ತಮ್ಮ ದಢೂತಿ ದೇಹದಿಂದಲೇ ಪರಿಚಯ.

ಕನ್ನಡ ಚಿತ್ರರಂಗದ ಬಹುತೇಕ ನಾಯಕರ ಜೊತೆ ನಟಿಸಿರುವ ಬುಲೆಟ್, ಪರದೆ ಮೇಲೆ ಬಂದ ತಕ್ಷಣವೇ ಪ್ರೇಕ್ಷಕರು ನಗೆಗಡಲಲ್ಲಿ ತೇಲುತ್ತಿದ್ದರು. ಇಂತಹ ಕಲಾವಿದ ಮರೆಯಾಗಿರುವುದು ಚಿತ್ರರಂಗಕ್ಕೆ ನಷ್ಟವನ್ನುಂಟು ಮಾಡಿದೆ.


Spread the love

Leave a Reply

Your email address will not be published. Required fields are marked *