ಹುಬ್ಬಳ್ಳಿಯ “ಆ ಬಿಲ್ಡಿಂಗ್”ನಲ್ಲಿ ’18ರ’ ಹುಡುಗನ ದುರ್ಮರಣ… ಚೇತನ ಹಿರೇಕೆರೂರ ಅಲ್ಲೇನು ಮಾಡಿದ್ದು…!?

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಕಾಂಪ್ಲೆಕ್ಸ್‌ನಲ್ಲಿ ಅವಘಡ ಸಂಭವಿಸಿ ಯುವಕನೋರ್ವ ಸಾವಿಗೀಡಾದ ಘಟನೆ ತಿಳಿಯುತ್ತಿದ್ದ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ, ಸ್ಥಳದ ಬಗ್ಗೆ ಪರಿಶೀಲನೆ ನಡೆಸಿ, ಸಾವಿಗೀಡಾದವನಿಗೆ ಪರಿಹಾರ ಕೊಡಿಸುವುದಾಗಿ ಹೇಳಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿದೆ…
ಶ್ರೇಯಾ ಜುಪಿಟರ್ ಕಾಂಪ್ಲೆಕ್ಸ್ ತಡೆಗೋಡೆ ಬಿದ್ದು ಯುವಕ ಸಾವು
ಹುಬ್ಬಳ್ಳಿ: ಮಳೆ ಬಂದ ಕಾರಣ ಅಂಗಡಿ ಒಳಗೆ ನೀರು ನುಗ್ಗುತ್ತಿದ್ದನ್ನು ಹೊರಗೆ ತಗೆಯುತ್ತಿರುವಾಗ ತಡೆಗೋಡೆ ಬಿದ್ದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಗೋಕುಲ ರೋಡ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ಶ್ರೇಯಾ ಜುಪಿಟರ್ ಕಾಂಪ್ಲೆಕ್ಸ್ ಬಳಿ ನಡೆದಿದೆ.
ದರ್ಶನ ಹಿರಾಪೂರ 18 ವರ್ಷದ ಯುವಕ ಸಾವನ್ನಪ್ಪಿದ ದುರ್ದೈವಿ. ಶ್ರೇಯಾ ಜುಪಿಟರ್ ಕಾಂಪ್ಲೆಕ್ಸ್‌ನ ಕೆಳ ಮಹಿಡಿಯಲ್ಲಿ ಸಲೂನ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಇಂದು ಮಳೆ ಬಂದ ಕಾರಣ ಚರಂಡಿ ನೀರು ಅಂಗಡಿ ಒಳಗೆ ನುಗ್ಗಿದ ಪರಿಣಾಮ, ನೀರು ತಗೆಯುತ್ತಿರುವಾಗ ಪಕ್ಕದಲ್ಲಿದ್ದ ಕಂಪೌಡ ದರ್ಶನ ಮೇಲೆ ಕುಸಿದು ಬಿದ್ದಿದೆ. ದರ್ಶನ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೂಡಲೆ ಸ್ಥಳದಲ್ಲಿದ್ದವರು ಆಸ್ಪತ್ರೆಗೆ ರವಾನಿಸಿದರು ದರ್ಶನ ಪ್ರಾಣ ಉಳಿಯಲಿಲ್ಲ. ಈ ಘಟನೆ ತಿಳಿದಂತೆ ಅದೇ ವಾರ್ಡ್ ಸದಸ್ಯೆ ಚೇತನ್ ಎಸ್. ಹಿರೇಕೆರೂರ ಭೇಟಿ ನೀಡಿ ಕುಟುಂಬಸ್ಥರಿಗೆ ಸಮಾಧಾನ ಹೇಳಿದರು. ಅಷ್ಟೇ ಅಲ್ಲದೆ ಈ ಯುವಕನ ಸಾವಿಗೆ ಪರಿಹಾರ ಒದಗಿಸಬೇಕೆಂದರು.
ಇನ್ನು ಈ ಸಮಸ್ಯೆ ಬಗ್ಗೆ ಕಾಂಪ್ಲೆಕ್ಸ್ ಮಾಲೀಕರಿಗೆ ಇಲ್ಲಿರುವ ಮಳಿಗೆ ಬಾಡಿಗೆದಾರರು ಎಷ್ಟೋ ಬಾರಿ ಹೇಳಿದರು ತಲೆ ಕೆಡೆಸಿಕೊಂಡಿದ್ದಲ್ಲವಂತೆ. ಇದಕ್ಕೆಲ್ಲಾ ಕಾಂಪ್ಲೆಕ್ಸ್ ಮಾಲೀಕರ ಹೊಣೆ ಎಂದು ಮಳಿಗೆ ಮಾಲೀಕರು ಆರೋಪ ಮಾಡುತ್ತಿದ್ದಾರೆ.