Posts Slider

Karnataka Voice

Latest Kannada News

ಬಿಎಎಸ್ವೈ ಕುಟುಂಬದವರು ಲೂಟಿ ಹೊಡಿತ್ತಿದ್ದಾರೆ… ಇನ್ನೂ ಏನೇನು ಹೇಳಿದ್ದಾರೆ ನೀವೇ ಕೇಳಿ…!

1 min read
Spread the love

ವಿಜಯಪುರ: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಇಲ್ಲದಾಗ ಅವರ ಮನೆಯವರು ಯಾರೂ ಇರಲಿಲ್ಲ. ಈಗ ಸಿಎಂ ಆದ ಮೇಲೆ ಕಾವೇರಿಯಲ್ಲಿ ಬಂದು ರಾಜ್ಯವನ್ನ ಲೂಟಿ ಮಾಡುತ್ತಿದ್ದಾರೆಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಆಕ್ರೋಶವ್ಯಕ್ತಪಡಿಸಿದರು.

ಸಂಫೂರ್ಣ ವೀಡಿಯೋ ಇಲ್ಲಿದೆ ನೋಡಿ..

ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ಸೇರಿದಂತೆ ಮಕ್ಕಳು, ಮರಿಮಕ್ಕಳು ಎಲ್ಲರೂ ಬಂದು ಹಣವನ್ನ ಲೂಟಿ ಮಾಡುತ್ತಿದ್ದಾರೆ. ವಿಜಯೇಂದ್ರನ ಕೈ ಕಾಲು ಒತ್ತುವವರಿಗೆ ನಿಗಮ ಮಂಡಳಿಗಳನ್ನ ನೀಡಲಾಗಿದೆ ಎಂದು ಹೇಳಿದರು.

ಯಡಿಯೂರಪ್ಪನವರು ವಿಜಯಪುರಕ್ಕೆ ಕಾರಲ್ಲಿ ಬಂದರೇ ಪೆಟ್ರೋಲ್ ಹಾಕುತ್ತಿದ್ದು ನಾವು. ಆಗ ವಿಜಯೇಂದ್ರ ಇರಲಿಲ್ಲ.  ಸುಖಾಸುಮ್ಮನೆ ಪಕ್ಷವನ್ನ ಹಾಳು ಮಾಡುವ ಕೆಲಸವನ್ನ ಮಾಡುತ್ತಿದ್ದಾರೆ.

ನಾ ಕಾವೂಂಗಾ ನಾ ಖಿಲವೂಂಗಾ ಎನ್ನುತ್ತಿದ್ದವರು ಪ್ರಧಾನಿಯವರು. ಆದರೆ, ಇಲ್ಲಿ ಮನೆಯವರು ತಿನ್ನುತ್ತಿದ್ದಾರೆ. ಕುಟುಂಬದ ಎಲ್ಲರೂ ಮನೆಯನ್ನ ಬಿಟ್ಟು ಹೋಗಿದ್ದೀರಿ. ಮನೆಯನ್ನ ಖಾಲಿ ಮಾಡಿ ಎಂದು ಪಾಟೀಲ ಆಕ್ರೋಶವ್ಯಕ್ತಪಡಿಸಿದರು.


Spread the love

Leave a Reply

Your email address will not be published. Required fields are marked *

You may have missed