Posts Slider

Karnataka Voice

Latest Kannada News

ಶೀಘ್ರದಲ್ಲಿ ಮೂಲೆಗೆ ಸೇರಲಿದೆ “ಬಿಆರ್‌ಟಿಎಸ್”- ಸಚಿವ ಸಂತೋಷ ಲಾಡ್ ‘ಮಾಸ್ಟರ್ ಪ್ಲಾನ್’…!!!

1 min read
Spread the love

ಧಾರವಾಡ: ಸಾರ್ವಜನಿಕರ ತೀವ್ರ ಆಕ್ಷೇಪಣೆಗೆ ಕಾರಣವಾಗಿರುವ ಬಿಆರ್‌ಟಿಎಸ್ (Bus Rapid Transit System) ಹುಬ್ಬಳ್ಳಿ ಧಾರವಾಡದಲ್ಲಿ ಇತಿಹಾಸ ಸೇರುವುದು ಫಿಕ್ಸ್ ಆಗಿದ್ದು, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಇದೇ ವರ್ಷದಲ್ಲಿ ಮುಹೂರ್ತ ಹುಡುಕುವುದು ಶತಃಸಿದ್ಧ ಎಂದು ಗೊತ್ತಾಗಿದೆ.

ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದ ಸಮಯದಲ್ಲಿ ಅವಳಿನಗರದ ನಡುವೆ ಅಹ್ಮದಾಬಾದ್‌ನಲ್ಲಿ ಆರಂಭಗೊಂಡಿದ್ದ ಬಿಆರ್‌ಟಿಎಸ್ ವ್ಯವಸ್ಥೆಯನ್ನ ಜಾರಿಗೆ ತರಲಾಗಿತ್ತು. ಅವೈಜ್ಞಾನಿಕ ವಿಧಾನಗಳನ್ನ ಅನುಸರಿಸಿದ ಪರಿಣಾಮ ವಾಹನ ಸವಾರರು ಪ್ರತಿ ದಿನವೂ ಸಂಕಷ್ಟ ಎದುರಿಸುತ್ತಿದೆ.

ಬಿಆರ್‌ಟಿಎಸ್ ಮಾರ್ಗದಲ್ಲಿ ಚಿಗರಿ ಬಸ್‌ಗಳಷ್ಟೇ ಸಂಚಾರ ಮಾಡುವ ವ್ಯವಸ್ಥೆ ಹೊಂದಿದ್ದರಿಂದ ಅವಳಿನಗರದ ಹಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ದಿನವೂ ಹೆಚ್ಚಾಗುತ್ತಿದೆ. ಇದರಿಂದ ವಾಹನ ಹೊಂದಿದವರು ಹಿಡಿಶಾಪ ಹಾಕುತ್ತಿರುತ್ತಾರೆ.

ಚಿಗರಿ ಬಸ್‌ನಿಂದ ಹಲವರ ಪ್ರಾಣಗಳು ಹೋಗಿದ್ದು, ಕುಟುಂಬಗಳು ಈಗಲೂ ಕಣ್ಣೀರಿಡುತ್ತಿವೆ. ಹೀಗಾಗಿಯೇ ‘ಬ್ಯಾನ್ ಬಿಆರ್‌ಟಿಎಸ್’ ಕೂಗು ಹಲವು ಬಾರಿ ಕೇಳಿ ಬರುತ್ತಲೇ ಇರತ್ತೆ. ಹೋರಾಟಗಳು ಆಗಾಗ ನಡೆಯುತ್ತಿವೆ.

ಈ ಎಲ್ಲ ಸಮಸ್ಯೆಗಳನ್ನ ಅರಿತಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಜನರ ಆಶೋತ್ತರಗಳಿಗೆ ಅತ್ಯುತ್ತಮ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾದ ಜೊತೆಗೆ ಸಂಪರ್ಕ ಸಾಧಿಸಿ, ಅಲ್ಲಿನ ರಸ್ತೆ ಸಂಚಾರದ ರೂಪವನ್ನ ಅವಳಿನಗರದ ಜನರಿಗಾಗಿ ಆರಂಭಿಸಲಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸಿದೆ.

ಈ ವ್ಯವಸ್ಥೆ ಜಾರಿಗೆ ಬಂದರೇ, ವಾಹನ ದಟ್ಟನೆ ಮೂವತ್ತು ವರ್ಷದ ನಂತರವೂ ಬರುವ ಸಾಧ್ಯತೆಯಿಲ್ಲ. ಅಷ್ಟೇ ಅಲ್ಲ, ಈಗ ಬಿಆರ್‌ಟಿಎಸ್‌ನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಐದು ಪಟ್ಟಾದರೂ, ಯಾವುದೇ ತೊಂದರೆ ಆಗಲಾರದು ಎಂದು ಹೇಳಲಾಗಿದೆ.

ಅವಳಿನಗರದ ಬಹುದಿನದ “ಪೀಕಲಾಟ”ವನ್ನ ಕೊನೆಗಾಣಿಸಲು ಸಚಿವ ಸಂತೋಷ ಲಾಡ್ ಅವರು ಭರವಸೆಯ ಬೆಳಕಾಗಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed