ಧಾರವಾಡದ “ಚಿಗರಿಯಲ್ಲಿ ಹೊಗೆ”- ಆತಂಕ ಸೃಷ್ಟಿಸಿದ ಘಟನೆ…

ಧಾರವಾಡ: ನಗರದ ಜನನಿಬೀಡ ಪ್ರದೇಶವಾದ ಜುಬ್ಲಿ ಸರ್ಕಲ್ ನ ಬಿಆರ್ ಟಿಎಸ್ ಬಸ್ ನಿಲ್ದಾಣದ ಬಳಿಯೇ ಚಿಗರಿ ಬಸ್ಸಿನಲ್ಲಿ ಹೊಗೆ ಕಂಡು ಬಂದು ಆತಂಕ ಸೃಷ್ಟಿಸಿದ ಘಟನೆ ಈಗಷ್ಟೇ ಸಂಭವಿಸಿದೆ.
ಧಾರವಾಡದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಚಿಗರಿಯಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದರು. ದಟ್ಟವಾದ ಹೊಗೆ ಕಂಡು ಬಂದ ಹಿನ್ನೆಲೆಯಲ್ಲಿ ಇನ್ನುಳಿದ ವಾಹನ ಸವಾರರು ಕೆಲಕಾಲ ಗೊಂದಲಕ್ಕೆ ಒಳಗಾಗಿದ್ದರು.