BRTS ಅಪಾಯಕಾರಿ ಕಾಮಗಾರಿ- ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ
1 min readಹುಬ್ಬಳ್ಳಿ: ಅವೈಜ್ಞಾನಿಕ, ಅಪಾಯಕಾರಿ ಬಿ.ಆರ್.ಟಿ.ಎಸ್ ವಿರೋಧಿಸಿ ಆಮ್ ಆದ್ಮಿ ಪಕ್ಷ ಧಾರವಾಡ ಸಮಿತಿ ಹೊಸೂರಿನ ಬಿಆರ್ ಟಿಎಸ್ ಮುಖ್ಯ ಕಚೇರಿಯ ಎದುರಿಗೆ ಪ್ರತಿಭಟನೆ ನಡೆಸಿತು.
ಈ ವೇಳೆ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ಬಿಆರ್ಟಿಎಸ್ ಹುಬ್ಬಳ್ಳಿ-ಧಾರವಾಡ ಜನತೆಯ ಮಹತ್ವಾಕಾಂಕ್ಷೆ ಯೋಜನೆ. ಅವಳಿ ನಗರದ ನಡುವೆ ಕ್ಷಿಪ್ರ ಬಸ್ ಸೇವೆ ಕಲ್ಪಿಸುವ ಉದ್ದೇಶದಿಂದ ನಿರ್ಮಾಣ ಮಾಡಲಾದ ಯೋಜನೆಯಾಗಿದ್ದು, ಇದೀಗ ಅದು ಅವೈಜ್ಞಾನಿಕ, ಅಪಾಯಕಾರಿ ವಿನ್ಯಾಸದ ಕಾಮಗಾರಿಯಾಗಿದೆ. ಸುಮಾರು 1200 ಕೋಟಿ ರೂ. ವೆಚ್ಚದ ಬಿಆರ್ಟಿಎಸ್ ಯೋಜನೆ ‘ಮೋಡ ಕಂಡಿದ್ದಕ್ಕೂ ಮಳೆ ಬಂದಿದ್ದಕ್ಕೂ ತಾಳೆಯಾಗದು’ ಎಂಬಂತಾಗಿದೆ.
ಸಾವಿರಾರು ಕೋಟಿ ಯೋಜನೆಯ ಬಿಆರ್ ಟಿಎಸ್ ಕಾರಿಡಾರ್ ನಲ್ಲಿ ಸಂಚರಿಸಲು ಇದೀಗ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಬಳಸುವ ಪರಿಸ್ಥಿತಿ ಬಂದೊಗಿದೆ. ಹುಬ್ಬಳ್ಳಿ-ಧಾರವಾಡದ ಜನರನ್ನು ಬಿಆರ್ ಟಿಎಸ್ ಯೋಜನೆ ವಿನಃ ಕಾರಣ ಅಪಾಯಕ್ಕೆ ಸಿಲುಕಿಸಿ, ದಿನ ನಿತ್ಯ ಅಪಘಾತಗಳನ್ನು ಎದುರಿಸುವಂತೆ ಮಾಡಿದೆ. ಈ ಎಲ್ಲ ಗೊಂದಲಗಳನ್ನು ಕೂಡಲೇ ಸರ್ಕಾರ ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಬಿಆರ್ ಟಿಎಸ್ ಯೋಜನೆಯನ್ನು ರದ್ದು ಮಾಡಿ ಎಲ್ಲ ಎಂಟು ಲೇನ್ ರಸ್ತೆಗಳನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು. ಹು-ಧಾ ಬಿಆರ್ ಟಿಎಸ್ ವ್ಯವಸ್ಥಾಪಕ ನಿರ್ದೇಶಕರ ಮೂಲಕ ನಗರಾಭಿವೃದ್ಧಿ ಸಚಿವರ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಕಾಸ ಸೊಪ್ಪಿನ, ಶಶಿಕುಮಾರ್ ಸುಳ್ಳದ, ಅನಂತಕುಮಾರ ಭಾರತೀಯ, ಶಿವಕಿರಣ ಅಗಡಿ, ಪಕ್ಷದ ಪದಾಧಿಕಾರಿಗಳಾದ ಡೇನಿಯಲ್ ಐಕೋಸ್, ರವೀಂದ್ರ ಶೆಣೈ, ಮನೋಹರ ಸುಗನಾನಿ, ನವೀನಸಿಂಗ್ ರಜಪೂತ, ಲಕ್ಷ್ಮಣ ರಾಥೋಡ, ಡಿ.ಕೆ.ಜಾದವ್ , ಪ್ರವೀಣ ತೊಂಡಿಹಾಳ, ಸಂತೋಷ ಮಾನೆ, ಶಿವಕುಮಾರ್ ಬಾಗಲಕೋಟೆ, ಆದಿತ್ಯ ನಾಯ್ಕ ಸೇರಿದಂತೆ ಮುಂತಾದವರಿದ್ದರು.