ಉಡುಪಿಯ ಬಿ ಆರ್ ಶೆಟ್ಟಿ ಆಸ್ಪತ್ರೆ ವಿವಾದ: ನಡೆಸಲು ಆಗಲ್ಲವೆಂದ ಶೆಟ್ಟಿಗಾರು

ಉಡುಪಿ: ಸರಕಾರಿ ಆಸ್ಪತ್ರೆಯನ್ನು ಗುತ್ತಿಗೆ ಆಧಾರದಲ್ಲಿ ಪಡೆದು ತಾನೇ ನಡೆಸುತ್ತೇನೆ. ಸುಸಜ್ಜಿತ ಹಾಸ್ಪಿಟಲ್ ಕೊಡುತ್ತೇನೆ ಎಂದು ರಾಜ್ಯಾಧ್ಯಂತ ಪ್ರಚಾರ ಪಡೆದಿದ್ದ ಬಿ.ಆರ್.ಶೆಟ್ಟಿ, ಇದೀಗ ತನಗೆ ಹಾಸ್ಪಿಟಲ್ ನಡೆಸಲು ಸಾಧ್ಯವಿಲ್ಲವೆಂದು ಕೈ ಎತ್ತಿದ್ದಾರೆ.
ಏಪ್ರಿಲ್ ನಂತರ ನಡೆಸಲು ಸಾಧ್ಯವಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಗೆ ಪತ್ರ ಬರೆದಿರುವ ಬಿ.ಆರ್. ಶೆಟ್ಟಿ ನಿಲುವಿನಿಂದ ಉಡುಪಿ ಶಾಸಕ ರಘುಪತಿ ಭಟ್ ಕೆಂಡಾಮಂಡಲವಾಗಿದ್ದಾರೆ. ಡಾ. ಬಿ ಆರ್ ಶೆಟ್ಟಿ ಬ್ಲಾಕ್ ಮೇಲ್ ತಂತ್ರಕ್ಕೆ ಮಣಿಯುವ ಪ್ರಶ್ನೆ ಇಲ್ಲ. ಬಿ ಆರ್ ಶೆಟ್ಟಿ ಸರಕಾರಿ ಆಸ್ಪತ್ರೆಯ ಪಕ್ಕದಲ್ಲಿ ಖಾಸಗಿ ಆಸ್ಪತ್ರೆ ತೆರೆದು ಉದ್ಯಮ ನಡೆಸಲು ಮುಂದಾಗಿದ್ದಾರೆ. ಹೊಸದಾಗಿ ಕಟ್ಟಲು ಹೊರಟಿರುವ 400 ಬೆಡ್ಡಿನ ಆಸ್ಪತ್ರೆ ಕಾನೂನು ಬದ್ಧವಾಗಿಲ್ಲ. ಉಡುಪಿಯಲ್ಲಿ ತಳಮಟ್ಟದಲ್ಲಿ ಮೂರು ಮಹಡಿ ನಿರ್ಮಿಸಲು ಅನುಮತಿ ಇಲ್ಲ. ಆದರೂ ಬಿಆರ್ ಶೆಟ್ಟಿ ಅವರು ಮೂರು ಮಹಡಿ ನಿರ್ಮಿಸಲು ಮುಂದಾಗಿದ್ದಾರೆ ಎಂದು ಶಾಸಕ ಟೀಕಿಸಿದ್ದಾರೆ.