ಹುಬ್ಬಳ್ಳಿ: “ಬ್ರೌನ್ ಕವರ್” ತೆಗೆದುಕೊಂಡವರು ಮತ್ತೂ ಕೊಡಿಸಿದವರೂ ನೋಡಲೇಬೇಕಾದ ಸ್ಟೋರಿಯಿದು…!!!
1 min read“ಪಾಕೀಟ್” ಪಡೆದು, ಪಡೆದಿದ್ದು ಸರಿ, ಇದನ್ನೇಲ್ಲ ಬಹಿರಂಗ ಮಾಡಬಾರದು ಅನ್ನೋರು, ಒಂದ್ಸಲ ಬೇರೆಯವರ ಬಗ್ಗೆ ಇಲ್ಲಸಲ್ಲದ ಕಥೆ ಕಟ್ಟಿ ಮಾತನಾಡುವಾಗ ಸ್ಮರಿಸಿಕೊಳ್ಳುವುದು ಒಳಿತಲ್ಲವೇ...
ಹುಬ್ಬಳ್ಳಿ: ಸಾಮಾಜಿಕ ಜವಾಬ್ದಾರಿ ಮತ್ತೂ ಸಾಮಾಜಿಕ ಕಾಳಜಿ ಹೊಂದಿದೆ ಎಂದು ಸಾರ್ವಜನಿಕರು ಅಂದುಕೊಂಡಿರುವ “ವ್ಯವಸ್ಥೆ”ಯ ಕೆಲವರು ಪಡೆಯಬಾರದ ಜಾಗದಲ್ಲೂ ಕಸವನ್ನ ತಿಂದು ಅರಗಿಸಿಕೊಂಡು “ಸಾಚಾ” ಪೋಸ್ ಕೊಡುವುದಕ್ಕೆ ಮುಂದಾಗಿರುವುದು ಮತ್ತಷ್ಟು ಅಸಹ್ಯ ಹುಟ್ಟಿಸುತ್ತಿದೆ.
ವಾಣಿಜ್ಯನಗರಿಯಲ್ಲಿ ನಡೆದಿರುವ ಈ ಬ್ರೌನ್ (ಖಾಕಿ) ಕವರ್ ಹಗರಣ ಬಹುತೇಕರ ಮನಸ್ಸನ್ನ ಘಾಸಿಗೊಳಿಸಿದೆ. ಕೆಲವರು ಇದನ್ನೇ ವ್ಯಂಗ್ಯವಾಡಿಕೊಂಡು “ಕವರ್” ಪಡೆದಿದ್ದು ಸರಿಯಾಗಿದೆ ಎಂದುಕೊಳ್ಳುತ್ತಿದ್ದಾರೆ.
ಹೆಣದ ಮನೆಯಲ್ಲಿ ತಿಂದುಂಡು ಬರುವ ಜಾಯಮಾನವನ್ನ ಸಾಮಾಜಿಕ ಜವಾಬ್ದಾರಿ ಹೊಂದಿರುವ “ವ್ಯವಸ್ಥೆ”ಯ ಕೆಲವರು ಮಾಡಿದ್ದನ್ನ ಈ ವ್ಯವಸ್ಥೆಯನ್ನ ಜೀವನಪರ್ಯಂತ ಕಾಯ್ದುಕೊಂಡು ಹೋಗಬೇಕಾದ ಉತ್ತಮ ಮನಸ್ಸುಗಳು ಚಿಂತಿಸಬೇಕಿದೆ.
ಈ ಬ್ರೌನ್ ಕವರ್ ಪಡೆದವರ, ಕೊಡಿಸಿದವರ ಮತ್ತೂ ಕೊಡಿಸುವಾಗ ಅದಲು ಬದಲು ಮಾಡಿದವರ ಸಂಪೂರ್ಣ ವಿವರ ರಹಸ್ಯವಾಗಿ ಉಳಿದಿಲ್ಲ. ಅದೇ ಕಾರಣಕ್ಕೆ “ಕವರ್” ಹೆಂಗಿತ್ತು ಅನ್ನೋದರ ಶ್ಯಾಂಪಲ್ ಇಲ್ಲಿ ಹಾಕಲಾಗಿದೆ.