ನೀರಲ್ಲಿ ಬಾಲಕ-ಈಜುಬಾರದ ಶಿಕ್ಷಕ- ಆಕೆ ಮಾನಕ್ಕಿಂತ ಪ್ರಾಣ ಹೆಚ್ಚು ಎಂದು ಸೀರೆಯನ್ನೇ.. !
1 min readವಿಜಯಪುರ: ಜೀವನದಲ್ಲಿ ಮಾನಕ್ಕಿಂತ ಯಾವುದು ದೊಡ್ಡದಲ್ಲ ಎಂದುಕೊಂಡ ಸಮಾಜದಲ್ಲಿ ಮಾನಕ್ಕಿಂತ ಪ್ರಾಣ ಮುಖ್ಯ ಎಂಬುದನ್ನ ಮಹಿಳೆಯೊಬ್ಬಳು ತೋರಿಸಿಕೊಟ್ಟಿದ್ದು, ಇಂತಹ ಮಹಾನ್ ತಾಯಿಯ ಬಗ್ಗೆ ನೀವು ತಿಳಿಯಲೇಬೇಕು. ಅದೇನು ಎಂಬುದನ್ನ ಪೂರ್ತಿಯಾಗಿ ಓದಿ ತಿಳಿಯಿರಿ.
ಅದಕ್ಕಿಂತ ಮೊದಲು ಈ ವೀಡಿಯೋ ನೋಡಿಬಿಡಿ..
ವೀಡಿಯೋದಲ್ಲಿ ಮಾತನಾಡಿದ ಈ ಮಹಿಳೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಎಡದಂಡೆ ಬಳಿಯ ನಿವಾಸಿ. ಹೆಸರು ಸಕೀನಾಬೇಗಂ ಕೊಡೇಕಲ್. ಮಾಡಿದ್ದೇನೆಂದರೇ, ತನ್ನದೇ ಪ್ರದೇಶದ ಬಾಲಕ ನೀರಿನಲ್ಲಿ ಮುಳುಗುತ್ತಿದ್ದ, ಇದನ್ನ ನೋಡಿ ಗಾಬರಿಯಾದ ಮಹಿಳೆ ಸಮೀಪದಲ್ಲೇ ಹೋಗುತ್ತಿದ್ದ ಶಿಕ್ಷಕ ಮಹೇಶ ಗಾಳೆಪ್ಪನವರರನ್ನ ಕೇಳಿಕೊಂಡಳು. ಅವರಿಗೆ ಈಜು ಬರಲ್ಲ ಎಂದ ತಕ್ಷಣವೇ, ಆ ಮಹಿಳೆ ಯಾರೂ ಮಾಡದ ಸಾಹಸವನ್ನ ಮಾಡಿಬಿಟ್ಟಿದ್ದಾಳೆ.
ಈಕೆ ತನ್ನ ಮಾನವನ್ನ ಲೆಕ್ಕಿಸದೇ ತಾನೇ ಉಟ್ಟ ಸೀರೆಯನ್ನೇ ಬಿಚ್ಚಿ ಶಿಕ್ಷಕನ ಒಂದು ಕೈಯಲ್ಲಿ ಕೊಟ್ಟು, ತಾನೊಂದು ಕೈಯಲ್ಲಿ ಸೀರೆ ಹಿಡಿದುಕೊಂಡು ಬಾಲಕ ಅರುಣ ದೊಡ್ಡಮನಿಯನ್ನ ಉಳಿಸಿದ್ದಾಳೆ.
ತನ್ನ ಗೆಳೆಯರೊಂದಿಗೆ ಆಟವಾಡುತ್ತಿದ್ದ ಅರುಣ ನೀರಿನಲ್ಲಿ ಮುಳುಗುತ್ತಿದ್ದ. ಸಕೀನಾಬೇಗಂ ಮಾಡಿದ ಕಾರ್ಯವನ್ನ ಯಾವ ಮಹಿಳೆಯೂ ಮಾಡಿಲ್ಲ. ಇಂತಹ ಮಹಿಳೆ ಬಾಲಕನ ಪ್ರಾಣವನ್ನ ಉಳಿಸಿ, ಮಾನಕ್ಕಿಂತ ಪ್ರಾಣ ಹೆಚ್ಚು ಎಂದು ಸಾಬೀತು ಮಾಡಿದ್ದಾಳೆ.. ಗ್ರೇಟ್ ಮದರ್..