ಗೋಪೂಜೆ ಮುನ್ನವೇ ಕೆರೆಯಲ್ಲಿ ಬಾಲಕರಿಬ್ಬರ ಸಾವು: ಧಾರವಾಡ ತಾಲೂಕಲ್ಲಿ ಹೃದಯವಿದ್ರಾವಕ ಘಟನೆ
ಧಾರವಾಡ: ಮಂಗಳವಾರ ಗೋವಿನ ಪೂಜೆ ಮಾಡುವ ಪರಿಪಾಠ ಹೊಂದಿರುವ ಕುಟುಂಬದ ಗೋವುಗಳ ಮೈ ತೊಳೆಯಲು ಹೋಗಿದ್ದ ಬಾಲಕರಿಬ್ಬರು, ಕೆರೆಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.
ಕ್ಯಾರಕೊಪ್ಪ ಗ್ರಾಮದ ಹೊರವಲಯದಲ್ಲಿ ಇರುವ ಕೆರೆಯಲ್ಲಿ ಆಕಳಿನ ಮೈ ತೊಳೆಯಲು ಹೋಗಿದ್ದ ಮೃತ್ಯುಂಜಯ ಕಾಮಧೇನು ಹಾಗೂ ರೋಹಿತ ಪೂಜಾರಿ ಸಾವಿಗೀಡಾಗಿದ್ದಾರೆ.
ಹದಿಮೂರು ಹದಿನಾಲ್ಕು ವಯಸ್ಸಿನ ಬಾಲಕರು ಆಕಳಿನ ಜೊತೆಗೆ ಕೆರೆಯ ಒಳಗಡೆ ಹೋಗಿದ್ದಾರೆ. ಆದರೆ, ಮರಳಿ ಬರಲು ಪ್ರಯತ್ನಿಸಿದಾಗ ಹೊರಗಡೆ ಬರದೇ ನೀರಲ್ಲಿ ಮುಳುಗಿದ್ದಾರೆ.
ಬಾಲಕರು ಬಾರದೇ ಆಕಳುಗಳಷ್ಟೇ ಮನೆಗೆ ಬಂದಾಗ ಆವಾಂತರ ನಡೆದಿದ್ದು ಗೊತ್ತಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಗ್ರಾಮೀಣ ಠಾಣೆಯ ಪೊಲೀಸರು, ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.