14ವರ್ಷದಲ್ಲಿ ಪ್ರೀತಿ-ಪ್ರೇಮ: ಗೋಣಿ ಚೀಲದಲ್ಲಿ ಸಿಕ್ಕ ಶವ…!
1 min readವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಮಾಡಲು ಹೊರಟಿದ್ದಾರೆಂದು ತಿಳಿದುಕೊಂಡು ಇಂತಹ ಹೇಯ ಕೃತ್ಯ ಮಾಡಲು ಮುಂದಾಗಿರುವ ಸಮಾಜ ಯಾವ ದಿಕ್ಕಿನಿಂದ ಹೊರಟಿದೆ ಎನ್ನುವುದೇ ಬೇಸರ ಸಂಗತಿಯಾಗಿದೆ.
ಕಲಬುರಗಿ: ತನ್ನ ಹದಿನಾಲ್ಕನೇ ವಯಸ್ಸಿನಲ್ಲಿಯೇ ಅನ್ಯ ಕೋಮಿನ ಹುಡುಗಿಯನ್ನ ಪ್ರೀತಿ ಮಾಡುತ್ತಿದ್ದಾನೆಂಬ ಸಂಶಯದಿಂದ ಹುಡುಗಿಯ ಮನೆಯವರು ಬಾಲಕನನ್ನ ಕೊಲೆ ಮಾಡಿ, ಗೋಣಿ ಚೀಲದಲ್ಲಿ ಹಾಕಿ ನದಿಗೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ಮಹೇಶ ಎಂಬ ಬಾಲಕನ ಶವ ಚಾಮನೂರ-ನರಿಬೋಳ ಬಳಿ ನಿರ್ಮಾಣ ಹಂತದ ಭೀಮಾ ಬ್ರಿಡ್ಜ್ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನರಿಬೋಳ ಗ್ರಾಮದ ಅನ್ಯ ಕೋಮಿನ ಯುವತಿಯನ್ನ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ 14 ವರ್ಷದ ಮಹೇಶನನ್ನ, ಹುಡುಗಿಯ ಕಡೆಯವರು ಕೊಲೆ ಮಾಡಿ, ಗೋಣಿಚೀಲದಲ್ಲಿ ನದಿಗೆ ಎಸೆದಿದ್ದಾರೆಂದು ಹೇಳಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಮಹೇಶ್, ಶವವಾಗಿ ದೊರಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಹಬೂಬ್ ಸೇರಿದಂತೆ ಮೂವರನ್ನ ಬಂಧನ ಮಾಡಲಾಗಿದೆ. ಘಟನೆಯ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.