ವಿದ್ಯಾರ್ಥಿಯನ್ನೇ ಸುಟ್ಟು ಹಾಕಿದ ವಿದ್ಯಾರ್ಥಿಗಳು…!
1 min readಜೊತೆಗೂಡಿ ಆಡುತ್ತಿದ್ದವರೇ ಜೊತೆಗಾರನನ್ನ ಮುಗಿಸಿದ ಕರಾಳ ಘಟನೆಯಿದು. ಇಲ್ಲಿ ಮಾನವೀಯತೆ ಎನ್ನುವ ಬದಲು, ಮಕ್ಕಳ ಮನಸ್ಥಿತಿ ಯಾವ ಮಟ್ಟಕ್ಕೆ ಹೋಗುತ್ತಿದೆ ಎಂದು ಅರಿತುಕೊಳ್ಳಬೇಕಾದ ಅವಶ್ಯಕತೆಯಿದೆ ಇಂದಿನ ಪಾಲಕರಿಗೆ ಅವಶ್ಯವಾಗಿದೆ..
ಹಾವೇರಿ: ವಾರದ ಹಿಂದೆ ಕಾಣೆಯಾಗಿದ್ದ 11 ವರ್ಷದ ವಿದ್ಯಾರ್ಥಿಯೋರ್ವ ಗೆಳೆಯರಿಂದಲೇ ಸುಟ್ಟು ಕರಕಲಾದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಇಡೀ ಜಿಲ್ಲೆ ಹೌಹಾರಿದೆ.
ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ತೇಜಸಗೌಡ ಮಲ್ಲಿಕೇರಿ ಎಂಬ ಬಾಲಕನ ಶವ ಸುಟ್ಟ ರೀತಿಯಲ್ಲಿ ಪತ್ತೆಯಾಗಿದ್ದು, ಘಟನೆಗೆ ಕಾರಣವಾಗಿದ್ದು, ಇಬ್ಬರು ಬಾಲಕರೇ ಎನ್ನುವ ಆತಂಕಕಾರಿ ಪ್ರಕರಣವಿದು.
ಹಾವೇರಿ ಶಹರದ ಅಶ್ವಿನಿ ನಗರದ ನಿವಾಸಿ ಜಗದೀಶ ಮಲ್ಲಿಕೇರಿ ಪುತ್ರ ತೇಜಸಗೌಡ ಮಲ್ಲಿಕೇರಿಯನ್ನ ಪರಿಚಯದ ಬಾಲಕರೇ ಕರೆದುಕೊಂಡು ಹೋಗಿ, ಯಾವುದೋ ಎಣ್ಣೆ ಹಾಕಿ ಸುಟ್ಟು ಹಾಕಿದ್ದು, ಬಾಲಕನ ಬುರುಡೆ ಸೇರಿದಂತೆ ಅಳಿದುಳಿದ ಮೂಳೆಗಳನ್ನ ವಶಕ್ಕೆ ಪಡೆಯಲಾಗಿದೆ.
ಹಾವೇರಿ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಇಬ್ಬರು ಬಾಲಕರನ್ನ ವಶಕ್ಕೆ ಪಡೆದು, ಮುಂದಿನ ತನಿಖೆಯನ್ನ ಕೈಗೊಂಡಿದ್ದಾರೆ.