ಹಳ್ಳದ ಸೆಳವಿಗೆ ಇಬ್ಬರು ಬಾಲಕರು ಬಲಿ
1 min readಕಲಬುರಗಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನೀರಿನ ಸೆಳೆಯುವನಲ್ಲಿ ಇಬ್ಬರು ಬಾಲಕರು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ ಘಟನೆ ಕಲಬುರ್ಗಿ ಜಿಲ್ಲೆಯ ಹಳೇ ಶಹಬಾದ್ ಬಳಿಯ ಹಳ್ಳದಲ್ಲಿ ಸಂಭವಿಸಿದೆ.
15 ವರ್ಷದ ವಿಶ್ವನಾಥ್ ಹಾಗೂ 16 ವರ್ಷದ ಪೂರ್ಣಚಂದ್ರ ಎನ್ನುವ ಬಾಲಕರೇ ಮೃತಪಟ್ಟಿದ್ದು, ಕೆಲಕಾಲ ಹುಡುಕಾಟದ ನಂತರ ಮೃತರ ಶವಗಳು ದೊರಕಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನ ದಾಟಬಹುದೆಂದು ಅಂದಾಜು ಮಾಡಿಕೊಳ್ಳುತ್ತ, ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಹೋಗುವಾಗ ದುರ್ಘಟನೆ ನಡೆದಿದೆ. ಕೆಲ ಸಮಯದ ನಂತರ ಗೊತ್ತಾಗಿದ್ದರಿಂದ ಯಾರೂ ಏನೂ ಮಾಡದ ಸ್ಥಿತಿ ನಿರ್ಮಾಣವಾಗಿತ್ತು.
ಇಬ್ಬರ ಬಾಲಕರ ಕುಟುಂಬದವರ ಆಕ್ರಂದನ ಘಟನಾ ಸ್ಥಳದಲ್ಲಿ ಮುಗಿಲು ಮುಟ್ಟಿತ್ತು. ಆಡಲು ಹೋದವರು ಮರಳಿ ಮನೆಗೆ ಬರಲಿಲ್ಲವೆಂಬ ನೋವು ಅವರ ಕಂಗಳಲ್ಲಿ ಕಾಣುತ್ತಿತ್ತು. ಪ್ರಕರಣ ಶಹಬಾದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.