ಗೃಹ ಸಚಿವರೂರಲ್ಲೇ “ಮನೆಗಾಗಿ” ಬಾಲಕನ ಬಲಿ….!? ಪಿಎಸ್ಐ ಮಾಡಿದ್ದಾದರೂ ಏನು…!
1 min readಹುಬ್ಬಳ್ಳಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಬಾಲಕನನ್ನ ಮನೆ ನಿರ್ಮಾಣಕ್ಕಾಗಿ ಬಲಿ ಕೊಡಲು ಮುಂದಾಗಿದ್ದಾರೆಂದು ಆರೋಪಿಸಲಾಗಿದ್ದು, ಪೊಲೀಸರು ಈ ಬಗ್ಗೆ ದೂರು ಪಡೆಯದೇ ಸತಾಯಿಸಿದ ಪರಿಣಾಮ ಪಾಲಕರು ಗೋಳಿಡುವ ಸ್ಥಿತಿ ನಿರ್ಮಾಣವಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಉಪ್ಪುನಸಿ ಗ್ರಾಮದಲ್ಲಿಯೇ ದುರ್ಘಟನೆ ನಡೆದಿದೆ. ಹರೀಶಯ್ಯ ನಾಗಯ್ಯ ಹಿರೇಮಠ ಎಂಬ ಬಾಲಕನಿಗೆ ಚಿತ್ರಹಿಂಸೆ ನೀಡಿ, ಮನೆಯ ಪಾಯದಲ್ಲಿ ಹಾಕಲು ಮುಂದಾಗಿದ್ದರು. ಅದೇ ಸಮಯದಲ್ಲಿ ಕೆಲವರು ನೋಡಿ, ಬಾಲಕನನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಬಗ್ಗೆ ಆಡೂರ ಪೊಲೀಸ್ ಠಾಣೆಗೆ ದೂರು ನೀಡಲು ಬಾಲಕನ ತಂದೆ ನಾಗಯ್ಯ ಎಷ್ಟೇ ಅಲೆದಾಡಿದರೂ ದೂರನ್ನ ಪಡೆದಿಲ್ಲ. ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಇದೀಗ ಹುಬ್ಬಳ್ಳಿಯ ಕಿಮ್ಸನಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.
ಬಾಲಕನ ಸಾವಿನಿಂದ ಕಂಗಾಲಾಗಿರುವ ಕುಟುಂಬಸ್ಥರು ಪೊಲೀಸರು ಲಂಚ ಪಡೆದು ತಮ್ಮ ದೂರನ್ನ ಪಡೆದಿಲ್ಲ. ನಮ್ಮ ಮಗನ ಸಾವಿಗೆ ಅವರೇ ಕಾರಣ ಎಂದು ದೂರುತ್ತಿದ್ದಾರೆ.
ಶಿವರುದ್ರಪ್ಪ ಹಾವೇರಿ, ಬಸವಣ್ಣೆವ್ವ ಪ್ರಭಾಕರ ಕರಿಶೆಟ್ಟರ, ಪ್ರವೀಣ ಕರಿಶೆಟ್ಟರ,ಕುಮಾರ ವೀರಭದ್ರಪ್ಪ ಹಾವೇರಿ ಎಂಬುವರಿಂದ ಬಾಲಕನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಲಾಗಿದ್ದು, ಗೃಹ ಸಚಿವರ ಜಿಲ್ಲೆಯಲ್ಲೇ ಇಂತಹ ಘಟನೆ ನಡೆದರೇ, ಇನ್ನುಳಿದ ಜಿಲ್ಲೆಗಳ ಸ್ಥಿತಿ ಏನು ಎನ್ನುವಂತಾಗಿದೆ.