ಹುಬ್ಬಳ್ಳಿಯ “ಬೂಗೀ Bogie” ರೆಸ್ಟೋರೆಂಟ್ ’24*7′ ಮತ್ತೆ ಆರಂಭ…

ಹುಬ್ಬಳ್ಳಿ: ವಾಣಿಜ್ಯನಗರದಲ್ಲಿ ಹೊಸತನವನ್ನ ಮೂಡಿಸಿದ್ದ ‘ಬೂಗೀ ಬೂಗೀ’ ರೇಲ್ವೆ ಹಳಿಯ ಮೇಲಿನ ಹೊಟೇಲ್ ಇಂದಿನಿಂದ ಮತ್ತೆ ಆರಂಭಗೊಂಡಿದ್ದು, ಗ್ರಾಹಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಕೆಲವು ತಾಂತ್ರಿಕ ತೊಂದರೆಯಿಂದ ಕೆಲವು ದಿನಗಳಿಂದ ಸೇವೆಯನ್ನ ಸ್ಥಗಿತಗೊಳಿಸಿದ್ದ ಕಂಪನಿಯು ಕಾನೂನು ಹೋರಾಟದ ಮೂಲಕ ಯಶ ಸಾಧಿಸಿ, ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡಲು ಮುಂದಾಗಿದೆ.
ರೇಲ್ವೆ ನಿಲ್ದಾಣದ ಮುಂದಿನ ವರಾಂಡದಲ್ಲಿ ವಿವಿಧ ಬಗೆಯ ಖಾಧ್ಯಗಳನ್ನ ಸಿದ್ಧಪಡಿಸಿ ಅತ್ಯುತ್ತಮ ಸೇವೆಯನ್ನ ನೀಡಲಾಗುತ್ತಿದೆ. ಅವಳಿನಗರದಲ್ಲಿ ದಿನದ 24 ಗಂಟೆಯೂ ತೆರೆದಿರುವ ಏಕೈಕ ಹೊಟೇಲ್ ಇದಾಗಿದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಗ್ರಾಹಕರ ಬಯಕೆಯಂತೆ ಸೇವೆ ಒದಗಿಸಲಾಗುತ್ತಿದೆ.
ಬೂಗೀ ಬೂಗೀ ರೆಸ್ಟೋರೆಂಟ್ ನಿಮ್ಮನ್ನ ಆಕರ್ಷಣೆ ಮಾಡುವ ಜೊತೆಗೆ ಬಾಯಿ ಚಪ್ಪರಿಸುವ ಸ್ವಾದಿಷ್ಟ ಅಡುಗೆಯನ್ನ ಮಾಡಿಕೊಡುತ್ತಿದೆ. ನೀವೂ ಹೋಗಿ ಅಸ್ವಾಧಿಸಿ.