ಧಾರವಾಡದ “ಬಾಡಿ ಬಿಲ್ಡರ್” ಪ್ರಭಾಕರ ಸೂಸೈಡ್…!

ಧಾರವಾಡ: ನಗರದ ಹೊಸಯಲ್ಲಾಪುರ ಪ್ರದೇಶದಲ್ಲಿ ಬಾಡಿ ಬಿಲ್ಡರ್ ವೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.

ಬಾಡಿ ಬಿಲ್ಡರ್ ಪ್ರಭಾಕರ ಆನಂದಪ್ಪ ಕಬ್ಬಾರ ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಮನೆಯಲ್ಲಿನ ಮೇಲ್ಚಾವಣಿಗೆ ಹಗ್ಗ ಕಟ್ಟಿಕೊಂಡು ನೇಣು ಹಾಕಿಕೊಂಡಿದ್ದಾನೆ.
ಸುಮಾರು 40 ವರ್ಷದ ಪ್ರಭಾಕರ, ಕೆಲವು ದಿನಗಳಿಂದ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಇಸ್ಪೀಟ್ ಆಟಕ್ಕೆ ಬಿದ್ದು ಬದುಕನ್ನ ಸಾಲದಲ್ಲಿ ನೂಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಸಾಕಷ್ಟು ಒಳ್ಳೆಯ ಜನರೊಂದಿಗೆ ಸಂಪರ್ಕದಲ್ಲಿ ಪ್ರಭಾಕರ, ಇಸ್ಪೀಟ್ ಆಟಕ್ಕೆ ಮುಂದಾದಾಗ, ಕಳೆದ ಒಂದು ವರ್ಷದಿಂದ ಬಹುತೇಕರ ಸಂಪರ್ಕದಿಂದ ದೂರವುಳಿದಿದ್ದನೆಂದು ಹೇಳಲಾಗಿದೆ.
ಅತಿಯಾದ ಇಸ್ಪೀಟ್ ನಿಂದ ಸಾಲ ಹೆಚ್ಚಾಗಿತ್ತೆಂದು ಗೊತ್ತಾಗಿದ್ದು, ಪೊಲೀಸರು ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿ, ಮುಂದಿನ ಕಾನೂನು ಕ್ರಮವನ್ನು ಜರುಗಿಸಿದ್ದಾರೆ.