ಹುಬ್ಬಳ್ಳಿ ಕಿಮ್ಸನಿಂದ ಯುವಕನ ಶವ ನಾಪತ್ತೆ…!

ಧಾರವಾಡ: ಹೊಸದಾಗಿ ಬೈಕ್ ತೆಗೆದುಕೊಂಡು ಖುಷಿಯಲ್ಲಿ ಬೈಕ್ ಚಲಾಯಿಸುತ್ತಿದ್ದ ಸಮಯದಲ್ಲಿ ಬೈಕಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡು, ಹುಬ್ಬಳ್ಳಿಯ ಕಿಮ್ಸಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಶವವನ್ನ ಯಾರೂ ತೆಗೆದುಕೊಂಡು ಹೋಗಿದ್ದಾರೆಂದು ಹುಡುಕಾಟ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.
ಮುಳಗುಂದ ಬಳಿಯ ಚಿಂಚಲಿ ವಡ್ಡರಗೇರಿ ಪ್ರದೇಶದ ವೀರೇಶ ಗಿಡ್ಡಪ್ಪ ಬಂಡಿವಡ್ಡರ ಎಂಬ ಯುವಕ ಮೊನ್ನೆ ಬೈಕಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಇದೇ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, 25 ವಯಸ್ಸಿನ ಯುವಕ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ಯುವಕನ ಶವವನ್ನ ಯಾರಿಗೂ ಗೊತ್ತಾಗದೇ ಹಾಗೇ ತೆಗೆದುಕೊಂಡು ಹೋಗಲಾಗಿದೆ.
ಮೃತ ಯುವಕನ ಶವವನ್ನ ಕಿಮ್ಸನ ಶವಾಗಾರದಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮುಳಗುಂದ ಪೊಲೀಸ್ ಠಾಣೆಗೆ ಮಾಹಿತಿಯನ್ನ ರವಾನೆ ಮಾಡಲಾಗಿದೆ. ಅಲ್ಲಿಯೂ ಕೂಡಾ ಗೊಂದಲ ಸೃಷ್ಠಿಯಾಗಿದೆ.
ಗ್ರಾಮದ ಜನರನ್ನ ಕೇಳಿದರೇ, ಆ ಯುವಕನ ಶವಸಂಸ್ಕಾರ ನಡೆಯಿತು ಎನ್ನುತ್ತಿದ್ದಾರೆ. ಆದರೆ, ಮುಳಗುಂದ ಪಿಎಸ್ಐ ಮಾತ್ರ ನಾವೂ ಗದಗನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ, ಶವವನ್ನ ತೆಗೆದುಕೊಂಡು ಹೋಗಿದ್ದು, ಯಾಕೆ, ಹುಬ್ಬಳ್ಳಿಯಲ್ಲಿ ಹುಡುಕಾಟ ನಡೆಸಿದ್ದು ಯಾಕೆ ಎಂಬುದರ ಬಗ್ಗೆ ಜಿಜ್ಞಾಸೆ ಆರಂಭವಾಗಿದೆ. ಕಿಮ್ಸನಲ್ಲಿ ಏನಾದರೂ ನಡೆಯಬಹುದು ಎನ್ನುವುದಕ್ಕೆ ಶವ ನಾಪತ್ತೆಯಾಗಿರೋ ಪ್ರಕರಣವೂ ಸಾಕ್ಷಿಯಾಗಿದೆ.