ಹುಬ್ಬಳ್ಳಿಯಲ್ಲಿ ಸಿಕ್ಕ “ಹಾಲಹರವಿ ಶವ”ದ ಹಿಂದೆ ಅನುಮಾನದ ಹುತ್ತ…!!!

ಹುಬ್ಬಳ್ಳಿ: ಮೂರು ಮಕ್ಕಳನ್ನ ಹೊಂದಿದ ವ್ಯಕ್ತಿಯೋರ್ವ ಜಾತ್ರೆಗೆ ಬಂದು ಶವವಾದ ಘಟನೆ ಗಿರಣಿಚಾಳದ ಬಳಿಯ ಗ್ಲಾಸ್ ಹೌಸ್‌ನ ಬಾವಿಯಲ್ಲಿ ಸಂಭವಿಸಿದೆ.
ಹುಲ್ಲೇಶ ಹಾಲಹರವಿ ಎಂಬಾತನೇ ಸಾವಿಗೀಡಾಗಿದ್ದು, ದೇಹದ ಮೇಲೆ ಗಾಯಗಳಾಗಿದ್ದರಿಂದ ಇದು ಕೊಲೆಯೇ ಎಂಬ ಪ್ರಶ್ನೆ ಮೂಡಿದೆ.
ಎಕ್ಸಕ್ಲೂಸಿವ್ ವೀಡಿಯೋ…
ಹುಲ್ಲೇಶನ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ವತಃ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನಮಿಡಿಯುವ ಘಟನೆಯ ವೀಡಿಯೋ…
ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಸತ್ಯಾಸತ್ಯತೆಯನ್ನ ಪೊಲೀಸರು ಪತ್ತೆ ಹಚ್ಚಬೇಕಿದೆ.