ಬೋಟ್ ಮುಳುಗಡೆ- 15ಜನರ ಜೀವ ಏನಾಗಿದೆ..! ಎಕ್ಸಕ್ಲೂಸಿವ್ ವೀಡಿಯೋ
ಉತ್ತರಕನ್ನಡ: ಮೀನುಗಾರಿಕೆಗೆ ತೆರಳಿದ ಬೋಟ್ ಒಂದು ತಾಂತ್ರಿಕ ದೋಷಕ್ಕೆ ಒಳಗಾಗಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅರಬ್ಬಿ ಸಮುದ್ರದ ಅಳಿವೆ ಪ್ರದೇಶದಲ್ಲಿ ಮುಳುಗಡೆ ಆಗಿರುವ ಘಟನೆ ನಡೆದಿದೆ.
ಬೋಟ್ ನ್ನ ನಡೆದ ರಕ್ಷಣೆ ಹೇಗಿದೆ ನೋಡಿ
ಬೋಟ್ನಲ್ಲಿದ್ದ ಸುಮಾರು 15ಜನ್ರನ್ನ ರಕ್ಷಣೆ ಮಾಡಲಾಗಿದೆ. ಫೆಲಿಕ್ಸ್ ಎಂಬುವವರಿಗೆ ಸೇರಿದ ಸೇಂಟ್ ಅಂಟೋ ಬೋಟ್ ಇದ್ದಾಗಿದ್ದು, ಎಂದಿನಂತೆ ಹೊನ್ನಾವರ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿತ್ತು. ಆದ್ರೆ ತಾಂತ್ರಿಕ ದೋಷದಿಂದಾಗಿ ಮುಳುಗಡೆಯಾಗಿದ್ದು, ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ. ಇನ್ನೂ ಮುಳುಗಡೆಯಾಗಿರುವ ಬೋಟ್ ನಿಂದ ರಕ್ಷಣೆ ಮಾಡಲಾಗಿರುವ 15ಜನ್ರನ್ನ ಬೇರೊಂದು ಬೋಟ್ ಮೂಲಕ ಕರೆತರಲಾಗುತ್ತಿದೆ..