ಬೆಂಗಳೂರು ಘಟನೆ: ದೇಗುಲದೊಳಗೆ ಹೋಗದಂತೆ ಮುಸ್ಲಿಂರೇ ಮಾನವ ಸರಪಳಿ ನಿರ್ಮಿಸಿದ್ದರು…!
ಬೆಂಗಳೂರು: ಪುಂಡರ ಗಲಭೆಯಿಂದ ಇಡೀ ಬೆಂಗಳೂರೇ ಹೊತ್ತಿ ಉರಿಯುತ್ತಿದೆ ಎಂದುಕೊಂಡಾಗಲೇ ಗಲಭೆಯಾದ ಸ್ಥಳದಲ್ಲಿ ದೇಗುಲದೊಳಗೆ ಯಾರೂ ಹೋಗದಂತೆ ಮಾನವ ಸರಪಳಿ ನಿರ್ಮಿಸಿದ್ದು ಬೇರಾರೂ ಅಲ್ಲ, ಅದೇ ಮುಸ್ಲಿಂ ಯುವಕರು.
ಹೌದು… ಬೆಂಗಳೂರಿನ ಕೆ.ಜೆ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ಗಲಭೆಗಳು ನಡೆಯುತ್ತಿದ್ದಾಗ ಪುಂಡ ಪೋಕರಿಗಳು ಕಂಡ ಕಂಡ ವಾಹನಗಳಿಗೆ ಬೆಂಕಿಯಿಡುತ್ತ ಮುನ್ನಡೆಯುತ್ತಿದ್ದರೇ ಹಲವು ಮುಸ್ಲಿಂ ಯುವಕರು ಅದೇ ಪ್ರದೇಶದಲ್ಲಿನ ದೇಗುಲದ ಮುಂದೆ ಕೈ ಕೈ ಹಿಡಿದು ಮಾನವ ಸರಪಳಿ ನಿರ್ಮಿಸಿದರು.
ಪೊಲೀಸ್ ವಾಹನಗಳು, ಸಾರ್ವಜನಿಕರ ವಾಹನಗಳು ಸುಡುತ್ತಿದ್ದಾಗಲೂ ಒಬ್ಬೇ ಒಬ್ಬ ದೇಗುಲದ ಒಳಗೆ ಹೋಗದಂತೆ ನೋಡಿಕೊಳ್ಳಲಾಗಿದೆ.
ಘಟನೆಯ ಬಗ್ಗೆ ತಪ್ಪುಗಳು ನಡೆದಾಗ ಹೇಗೆ ತೋರಿಸಲಾಗತ್ತೋ ಹಾಗೇ ಸರಿಯಾದ ಘಟನೆಗಳು ನಡೆದಾಗಲೂ ತೋರಿಸುವುದೇ ಮಾನವ ಧರ್ಮವಾಗಬೇಕಲ್ಲವೇ…!