ಸರಕಾರದ ಶಕ್ತಿ ಯೋಜನೆಗೆ “ಶಕ್ತಿ ತುಂಬಿದ್ದ” ಅಪರೂಪದ ಛಾಯಾಗ್ರಾಹಕ ಕೇದಾರಸ್ವಾಮಿಗೆ ಸಚಿವ ಲಾಡ್‌ರಿಂದ ಪ್ರಶಂಸೆ…

ಧಾರವಾಡ: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯನ್ನ ಬಳಕೆ ಮಾಡಿದ್ದ ಮಹಿಳೆಯೊಬ್ಬರ ಛಾಯಾಚಿತ್ರ ತೆಗೆದು ರಾಜ್ಯಾದ್ಯಂತ ಮನೆ ಮಾತಾಗಿದ್ದ ಅಪರೂಪದ ಛಾಯಾಗ್ರಾಹಕ ಬಿ.ಎಂ.ಕೇದಾರಸ್ವಾಮಿ ಅವರ ಕಾರ್ಯವನ್ನ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಪ್ರಶಂಸೆ ಸತ್ಕರಿಸಿ ಪ್ರಶಂಸಿದರು.
ರಾಜ್ಯ ಸರಕಾರ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದ ದಿನವೇ ಸಂಗೊಳ್ಳಿ ಗ್ರಾಮದ ವೃದ್ಧೆಯೋರ್ವಳು ಬಸ್ಸಿನ ಮೆಟ್ಟಿಲುಗಳಿಗೆ ನಮಸ್ಕರಿಸಿದ್ದಳು. ಈ ಪೋಟೋವನ್ನ ಧಾರವಾಡದ ಹಿರಿಯ ಛಾಯಾಗ್ರಾಹಕ ಬಿ.ಎಂ.ಕೇದಾರಸ್ವಾಮಿ ಸೆರೆ ಹಿಡಿದಿದ್ದರು.
ಈ ಪೋಟೋವನ್ನ ಸ್ವತಃ ಸಿಎಂ ಸಿದ್ಧರಾಮಯ್ಯನವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಳಕೆ ಮಾಡಿಕೊಂಡಿದ್ದರು. ಸಾವಿರಾರು ಜನರು ಇದೇ ಭಾವಚಿತ್ರವನ್ನ ಸ್ಟೇಟಸ್ ಇಟ್ಟುಕೊಂಡು ಸರಕಾರದ ಯೋಜನೆಯನ್ನ ಬೆಂಬಲಿಸಿದ್ದರು.
ಇಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಬಿ.ಎಂ.ಕೇದಾರಸ್ವಾಮಿ ಅವರಿಗೆ ಸತ್ಕರಿಸಿ, ಅಭಿನಂದನೆ ಸಲ್ಲಿಸಿದರು.
ಭಾವಚಿತ್ರದ ಬಗ್ಗೆ ಬಂದಿದ್ದ ವರದಿ..
ರಾಜ್ಯಾಧ್ಯಂತ “ವೈರಲ್” ಆದ “ಈ” ಭಾವಚಿತ್ರ ತೆಗೆದಿದ್ದು ಯಾರೂ ಗೊತ್ತಾ….!!!?