ಹುಬ್ಬಳ್ಳಿ-ಧಾರವಾಡದಲ್ಲಿ ದೊಡ್ಡ ಮೊತ್ತಕ್ಕೆ ನಡೆಯುತ್ತಿದೆ “ಪತ್ರಕರ್ತನ ಬ್ಲ್ಯಾಕ್ ಮೇಲ್”…!?
1 min readಧಾರವಾಡ: ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನ, ಓರ್ವ ಪತ್ರಕರ್ತ ಲಕ್ಷಾಂತರ ರೂಪಾಯಿಗೆ ಬೇಡಿಕೆಯಿಟ್ಟು, ಆಟವಾಡಿಸುತ್ತಿದ್ದಾರೆಂದು ಹೇಳಲಾಗಿದೆ.
ರಾಜ್ಯದ ಪ್ರಮುಖ ಪ್ರಕರಣದಲ್ಲಿ ಹೆಸರು ಬಂದ ಹಿನ್ನೆಲೆಯಲ್ಲಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಭಯ ಬೀಳುತ್ತಾನೆಂದುಕೊಂಡಿದ್ದ ವ್ಯಕ್ತಿಯು ಪ್ರಕರಣ ದಾಖಲು ಮಾಡಿ, ಬ್ಲ್ಯಾಕ್ ಮೇಲ್ ಪತ್ರಕರ್ತನ ಬಂಡವಾಳವನ್ನ ಹೊರಗೆ ಹಾಕಲು ಮುಂದಾಗಿದ್ದಾರೆಂದು ಗೊತ್ತಾಗಿದೆ.
ಕೆಲವು ಆಡೀಯೋ ತುಣುಕುಗಳನ್ನ ಹೊಂದಿರುವ ಆ ವ್ಯಕ್ತಿಗೆ ಪತ್ರಕರ್ತ, ಬೇರೆ ಬೇರೆಯವರಿಂದ ಭಯ ಬೀಳಿಸಲು ಮುಂದಾಗಿದ್ದಾನೆಂದು ಹೇಳಲಾಗಿದೆ. ತನಗೆ ಸರಿ ಮಾಡದೇ ಹೋದಲ್ಲಿ, ಬೇರೆ ಬೇರೆ ಕಡೆಯೂ ನಿನ್ನ ಬಗ್ಗೆ ‘ಅಪಪ್ರಚಾರ’ ಮಾಡುವ ಬೆದರಿಕೆ ಹಾಕಿದ್ದಾನೆಂದು ಹೇಳಲಾಗಿದೆ.
ಈ ಬಾರಿ ಬಣ್ಣ ಹಾಕಿಕೊಂಡ ಪತ್ರಕರ್ತನ ಬಣ್ಣ ಹೊರಗೆ ಹಾಕಲು, ವ್ಯಕ್ತಿ ಮುಂದಾಗಿದ್ದು, ಬಣ್ಣ ಕಳಚುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.