ಗ್ಯಾರಂಟಿ ವಸೂಲಿ ಕಾಂಗ್ರೆಸ್ ಸರಕಾರ ತೊಲಗಲಿ: ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಆಕ್ರೋಶ…
1 min readಭಾಗ್ಯಗಳನ್ನ ಕೊಟ್ಟ ಹಾಗೇ ಮಾಡಿ, ಬೆಲೆ ಏರಿಸಿ ಲೂಟಿ ಮಾಡುವ ಸರಕಾರ ತೊಲಗಲಿ- ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ
ನವಲಗುಂದ: ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಮಹಿಳೆಯರಿಗೆ ಭಾಗ್ಯಗಳನ್ನ ಕೊಟ್ಟು, ಮನೆಯಲ್ಲಿನ ಎಲ್ಲರಿಂದಲೂ ವಸೂಲಿ ಮಾಡುವ ಹುನ್ನಾರ ಮಾಡಿದೆ. ಇಂತಹ ಸರಕಾರ ತೊಲಗಲಿ ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಆಗ್ರಹಿಸಿದರು.
ನವಲಗುಂದ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದಿಂದ ಬೆಲೆ ಏರಿಕೆ ವಿರೋಧಿಸಿ ನಡೆದ ಹೋರಾಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರಕಾರ ನಮ್ಮೂರಿನ ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಕೊಟ್ಟ ಹಾಗೇ ಮಾಡಿ, ಪೆಟ್ರೋಲ್, ಡಿಸೇಲ್, ದಿನಸಿ ಪದಾರ್ಥಗಳ ಬೆಲೆ ಏರಿಸಿ, ಅವರ ಪತಿ, ಮಕ್ಕಳ ಮೂಲಕ ವಸೂಲಿ ಮಾಡುತ್ತಿದೆ. ಇದನ್ನ ಜನರು ಗಂಭೀರವಾಗಿ ಪರಿಗಣಿಸಬೇಕು. ಇಂತಹ ವ್ಯವಸ್ಥೆಗೆ ಮುಂದಾಗಿರುವ ಕಾಂಗ್ರೆಸ್ ಸರಕಾರ ತೊಲಗಲಿ ಎಂದರು.
ಭಾರತೀಯ ಜನತಾ ಪಕ್ಷದ ಪ್ರತಿಭಟನೆ ಆರಂಭದ ಮುನ್ನ ಹುತಾತ್ಮ ರೈತನ ವೀರಗಲ್ಲಿಗೆ ನಮನ ಸಲ್ಲಿಸಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಹುಬ್ಬಳ್ಳಿ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯನ್ನ ಕೆಲಕಾಲ ಬಂದ್ ಮಾಡಲಾಗಿತ್ತು.
ಬಿಜೆಪಿ ತಾಲೂಕು ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡ್ರ, ಬಸಣ್ಣ ಬೆಳವಣಿಕಿ, ಷಣ್ಮುಖ ಗುರಿಕಾರ, ಸಿದ್ದಣ್ಣ ಕಿಟಗೇರಿ, ಮುತ್ತಣ್ಣ ಮನಮಿ, ಮೃತ್ಯುಂಜಯ ಹಿರೇಮಠ, ಸೋಮು ಪಟ್ಟಣಶೆಟ್ಟಿ, ರೋಹಿತ ಮತ್ತಿಹಳ್ಳಿ, ಮುತ್ತು ಗಾಳಪ್ಪನವರ, ಪ್ರಭು ಬಳಗಣ್ಣನವರ, ಸಿದ್ಧನಗೌಡ ಪಾಟೀಲ, ಈರಣ್ಣ ಹಸಬಿ, ಮಂಜುನಾಥ ಅಕ್ಕಿ, ಅಣ್ಣಪ್ಪ ಬಾಗಿ, ನಿಂಗಪ್ಪ ಬಾರಕೇರ, ನಾಗಪ್ಪ ಹರ್ತಿ, ಜಕ್ಕನಗೌಡ್ರ, ನಿಂಗಪ್ಪ ಬಿಇದಲೂಮಠ, ದಾಡಿಬಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.