ಹನಿಟ್ರ್ಯಾಫ್- ಬಿಜೆಪಿ ಮುಖಂಡರಿಂದ ಬಿಜೆಪಿ ಮುಖಂಡನಿಗೆ ಬ್ಲ್ಯಾಕಮೇಲ್

ಮೈಸೂರು: ಖಾಸಗಿ ವೀಡಿಯೋ ಹೊಂದಿರುವ ಮೆಮೋರಿ ಕಾರ್ಡನ್ನ ತೋರಿಸುತ್ತ ಬಿಜೆಪಿ ಮುಖಂಡನಿಗೆ ಬಿಜೆಪಿ ಮುಖಂಡರೇ ಮುಂದಾಗಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು, ಕುವೆಂಪುನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಮುಖಂಡರಿಂದ ಬಿಜೆಪಿ ಮುಖಂಡನಿಗೇ ಬ್ಲ್ಯಾಕ್ ಮೇಲ್, ಸುಲಿಗೆ. ಖಾಸಗಿ ವೀಡಿಯೋವುಳ್ಳ ಮೇಮೋರಿ ಕಾರ್ಡ್‌ಗಾಗಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗಿದೆ. ಬರೋಬ್ಬರಿ ಒಂದು ವರ್ಷದ ಬಳಿಕ ಡಾ.ಕೆ.ಪ್ರಕಾಶ್ ಬಾಬುರಾವ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಬಂಧಿಸಿದ್ದಾರೆ.
ಆರೋಪಿಗಳಾದ ನೇರಳಕುಪ್ಪೆ ನವೀನ್, ಶಿವರಾಜ್ ಅಲಿಯಾಸ್ ಸ್ನೇಕ್ ಶಿವರಾಜ್, ಹರೀಶ್ ಅರೆಸ್ಟ್ ಆಗಿದ್ದು, ಅನಿತಾ, ವಿಜಿ ಹಾಗೂ ಇತರೆ ಆರೋಪಿಗಳ ಬಂಧನಕ್ಕೆ ಬಲೆ ಪೊಲೀಸರು ಬೀಸಿದ್ದಾರೆ. ಪಿರಿಯಾಪಟ್ಟಣದಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ.ಪ್ರಕಾಶ್ ಬಾಬುರಾವ್. ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷರಾಗಿದ್ದಾರೆ.
ಆರೋಪಿ ನೇರಳಕುಪ್ಪೆ ನವೀನ್ ಎಂಎಲ್‌ಸಿ ಅಡಗೂರು ಎಚ್.ವಿಶ್ವನಾಥ್ ಆಪ್ತ ಹಾಗೂ ಬಿಜೆಪಿ ಮುಖಂಡರಾಗಿದ್ದು, ಮೊಬೈಲ್ ಫೋನ್‌ನಲ್ಲಿದ್ದ ಮೇಮೋರಿ ಚಿಪ್ ಕಳವು ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದರು.
ನವೀನ ಒಂದು ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದ. ಜನವರಿಯಿಂದ ಅಕ್ಟೋಬರ್ ವರೆಗೆ 31.30 ಲಕ್ಷ ರೂಪಾಯಿಗಳನ್ನ ವೈದ್ಯರು ನೀಡಿದ್ದರು. ಆಸ್ತಿ ಮಾರಾಟ ಮಾಡಿ 27 ಲಕ್ಷ ರೂಪಾಯಿ ನೀಡಿದ್ದರೂ ಮೇಮೋರಿ ಚಿಪ್ ನ್ನ ಆರೋಪಿಗಳು ಹಿಂದಿರುಗಿಸಿರಲಿಲ್ಲ. ಹೀಗಾಗಿ ಅಂತಿಮವಾಗಿ ಮೈಸೂರಿನ ಕುವೆಂಪುನಗರ ಠಾಣೆಗೆ ಪ್ರಕರಣ ದಾಖಲು ಮಾಡಲಾಗಿತ್ತು.