ಪಾರ್ಟಿ ಡೆತ್: ಬಿಜೆಪಿ ಮುಖಂಡನನ್ನ ಬೀರ್ ಬಾಟ್ಲಿಯಿಂದ ಕೊಲೆ ಮಾಡಿದ ಗೆಳೆಯರು

ಮೈಸೂರು: ಹುಟ್ಟುಹಬ್ಬದ ಸಂಭ್ರಮದಲ್ಲಿ ಗೆಳೆಯರನ್ನ ಕರೆದುಕೊಂಡು ಸರ್ವೀಸ್ ಅಪಾರ್ಟ್ ಮೆಂಟ್ ಗೆ ಹೋಗಿದ್ದ ಬಿಜೆಪಿ ಮುಖಂಡ ಆನಂದ ಎಂಬುವವರನ್ನ ಗೆಳೆಯರೇ ಭೀಕರವಾಗಿ ಕೊಲೆ ಮಾಡಿದ ಘಟನೆ ಕುವೆಂಪುನಗರದಲ್ಲಿ ಸಂಭವಿಸಿದೆ.
ಆನಂದ ಅಲಿಯಾಸ್ ವಡ್ಡ ಆನಂದ ಎಂಬ ಬಿಜೆಪಿ ಮುಖಂಡ ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ನಡೆಸುತ್ತಿದ್ದ. ಪಾರ್ಟಿ ಮುಗಿದ ಮೇಲೆ ಜನತಾನಗರದ ಸ್ಮಶಾನ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಆರೋಪಿಗಳಲ್ಲಿ ಓರ್ವನನ್ನ ಬಂಧನ ಮಾಡಲಾಗಿದೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಕುವೆಂಪುನಗರ ಪೊಲೀಸ್ ಠಾಣೆಯವರು, ಇನ್ನುಳಿದವರ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.